ಗೇಟ್ (GATE) ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಎಂ.ಟೆಕ್ ಪ್ರವೇಶ, PSU ಉದ್ಯೋಗಗಳು, ಸಂಶೋಧನಾ ಫೆಲೋಶಿಪ್‌ಗಳು ಮತ್ತು ಖಾಸಗಿ ಕಂಪೆನಿಗಳಲ್ಲಿ ಹಲವು ವೃತ್ತಿ ಆಯ್ಕೆಗಳಿವೆ. ಉನ್ನತ ಶಿಕ್ಷಣ, ಸರ್ಕಾರಿ ಉದ್ಯೋಗ ಅಥವಾ ಖಾಸಗಿ ವಲಯದಲ್ಲಿ ಯಶಸ್ವಿ ವೃತ್ತಿ ಜೀವನಕ್ಕೆ ಇದೊಂದು ಪ್ರಮುಖ ಹೆಜ್ಜೆಯಾಗಿದೆ.
ಫೆಲೋಶಿಪ್‌ಗಳು ಮತ್ತು ಉತ್ತಮ ಸಂಬಳದೊಂದಿಗೆ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಗೇಟ್ ಪರೀಕ್ಷೆ ಸಹಕಾರಿಯಾಗಲಿದೆ. ಗೇಟ್ ಪರೀಕ್ಷೆ ಉತ್ತೀರ್ಣರಾಗುತ್ತಿದ್ದಂತೆ ಹಲವು ವೃತ್ತಿ ಆಯ್ಕೆಗಳು ತೆರೆದು ಕೊಳ್ಳಲಿವೆ. ಗೇಟ್ ಪರೀಕ್ಷೆಯ ಅಂಕಗಳಿಂದ Ü IIT, NIT,IISc ಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾವಕಾಶ ದೊರೆ ಯಲಿದೆ. ಪ್ರವೇಶಾತಿಯ ಜೊತೆಗೆ ತಿಂಗಳಿಗೆ ೧೨,೪೦೦ ರೂ.ಗಳವರೆಗೆ ಫೆಲೋಶಿಪ್ ಕೂಡ ದೊರೆಯಲಿದೆ.
ವಿದ್ಯಾರ್ಥಿಗಳಿಗೆ ಈ ಕೋರ್ಸ್ ನಿರ್ದಿಷ್ಟ ತಾಂತ್ರಿಕ ಜ್ಞಾನ, ಉತ್ತಮ ರಚನೆ ಮತ್ತು ಮುಂದಿನ ಅಧ್ಯಯನ ಅಥವಾ ವೃತ್ತಿ ಜೀವನದಲ್ಲಿನ ಬೆಳವಣಿಗೆಗೆ ಕಾರಣವಾಗಲಿದೆ. ಅಲ್ಲದೇ ONGC, NTPC, BHEL, IOCL ಮುಂತಾದ ಹಲವು PSU ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಈ ಉದ್ಯೋಗಳು ಉತ್ತಮ ಸಂಬಳ, ಸರ್ಕಾರಿ ಸವಲತ್ತುಗಳು ಮತ್ತು ಪಿಂಚಣಿ ಸೌಲಭ್ಯಗಳನ್ನೂ ನೀಡುತ್ತವೆ.
ಸಂಶೋಧನೆ ಮಾಡಲು ಬಯಸಿದರೆ ಪಿಎಚ್.ಡಿ. ಮಾಡಲೂ ಉತ್ತಮ ಆಯ್ಕೆಗಳಿವೆ. ಕೆಲವು ಸಂಸ್ಥೆಗಳು ಗೇಟ್ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಪಿಎಚ್.ಡಿ.ಗೆ ನೇರವಾಗಿ ಆಯ್ಕೆ ಮಾಡಿಕೊಳ್ಳಲಿವೆ. ಹೀಗಾಗಿ ಗೇಟ್ ಪರೀಕ್ಷೆ ಕೇವಲ ಎಂ.ಟೆಕ್. ಪ್ರವೇಶಕ್ಕೆ ಮಾತ್ರ ಸೀಮಿತವಾಗದೆ, ಸಂಶೋಧನೆ, ಬೋಧನೆ, ಸರ್ಕಾರಿ ಉದ್ಯೋಗ ಅಥವಾ ಖಾಸಗಿ ವಲಯವನ್ನೂ ಆಯ್ಕೆ ಮಾಡಿಕೊಳ್ಳಲು ಬಹು ಅವಕಾಶಗಳನ್ನು ತೆರೆದಿಡಲಿದೆ. ಆದ್ದರಿಂದ ಗೇಟ್ ಪರೀಕ್ಷೆಯ ಬಹುಮುಖಿ ಅವಕಾಶವಾಗಿ ಕಂಡು ಮುಂದಿನ ಹಂತವನ್ನು ಜಾಣ್ಮೆಯಿಂದ ಆರಿಸಿಕೊಳ್ಳಿ.





