Mysore
18
clear sky

Social Media

ಗುರುವಾರ, 15 ಜನವರಿ 2026
Light
Dark

ನೇರುಗಳಲೆ ಗ್ರಾಪಂ ವ್ಯಾಪಿಯಲ್ಲಿ ಅಕ್ರಮ ಗಣಿಗಾರಿಕೆ

ಸೋಮವಾರಪೇಟೆ: ತಾಲ್ಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ಸುತ್ತಮುತ್ತ ವ್ಯಾಪಕವಾಗಿ ನಿಯಮಬಾಹಿರವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂಬ ಗ್ರಾಮಸ್ಥರ ದೂರಿನ ಮೇರೆಗೆ ಹೊಸಳ್ಳಿ ಗ್ರಾಮದಲ್ಲಿ ತಹಸಿಲ್ದಾರ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಹಿರಿಯ ಅಽಕಾರಿಗಳು ಮತ್ತು ಗ್ರಾಮಸ್ಥರ ಸಭೆ ಮಂಗಳವಾರ ನಡೆಯಿತು.

ಹೊಸಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು ೧೭ ಕಲ್ಲು ಕ್ವಾರಿಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಈ ವಿಚಾರವಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮದ ಪ್ರಮುಖರಾದ ಭೋಜೇಗೌಡ, ಸಂಪತ್, ತಿಮ್ಮಯ್ಯ, ಸಚಿನ್, ಅನಿಲ್ ದೂರಿದರು.

ಗ್ರಾಮೀಣ ರಸ್ತೆಯಲ್ಲಿ ಭಾರದ ಮಿತಿ ಇಲ್ಲದೆ ಹತ್ತು ಚಕ್ರಗಳ ಟಿಪ್ಪರ್‌ಗಳು ಓಡಾಡುತ್ತಿವೆ. ಸಂಜೆ ಹೊತ್ತಿನಲ್ಲಿ ಕಲ್ಲು ಕ್ವಾರಿಗಳಲ್ಲಿ ಬ್ಲಾಸ್ಟಿಂಗ್ ನಡೆಯುತ್ತಿದೆ. ಅಕ್ಕಪಕ್ಕದ ಮನೆಗಳು ಬಿರುಕು ಬಿಟ್ಟಿವೆ. ಕ್ರಷರ್‌ಗಳಿಂದ ದೂಳು ಬರುತ್ತಿದ್ದು, ವ್ಯವಸಾಯ ಮಾಡಲು ಆಗುತ್ತಿಲ್ಲ. ಬಹುತೇಕ ಜನರು ಶ್ವಾಸಕೋಶ ಸಂಬಂಽ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಆರೋಪಿಸಿದರು. ಸರ್ಕಾರದ ವತಿಯಿಂದ ಗ್ರಾಮದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಸಬೇಕೆಂದು ಆಗ್ರಹಿಸಿದರು.

ನಿಯಮಬಾಹಿರ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಬೇಕು. ತಪ್ಪಿದಲ್ಲಿ ಗ್ರಾಮಸ್ಥರಿಗೆ ದಯಾಮರಣಕ್ಕೆ ಅನು ಮತಿ ಕೊಡಿಸಬೇಕು ಎಂದು ತಹಸಿಲ್ದಾರ್ ಅವರನ್ನು ಆಗ್ರಹಿಸಿದರು. ಗ್ರಾಮಕ್ಕೆ ಜೇನುಕಲ್ಲು ಬೆಟ್ಟ ಮೀಸಲು ಅರಣ್ಯ ಸಮೀಪದಲ್ಲಿದೆ. ಈ ಅರಣ್ಯಕ್ಕೆ ಹೊಂದಿಕೊಂಡ ಜಾಗದಲ್ಲಿ ಕಲ್ಲು ಕ್ವಾರಿ ಕೆಲಸ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮಸ್ಥರ ಕೋರಿಕೆಯಂತೆ ಅಧಿಕಾರಿಗಳು ಎಲ್ಲಾ ಕಲ್ಲು ಕ್ವಾರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಯಮ ಪಾಲಿಸದ ಕಲ್ಲುಕ್ವಾರಿಗಳನ್ನು ಸ್ಥಗಿತಗೊಳಿಸಲು ಕ್ರಮಕೈಗೊಳ್ಳುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಎಚ್.ಡಿ.ರೋಜ ಅವರಿಗೆ ತಹಸಿಲ್ದಾರ್ ಕೃಷ್ಣಮೂರ್ತಿ ಸೂಚಿಸಿದರು. ಕಂದಾಯ ಮತ್ತು ಅರಣ್ಯ ಇಲಾಖೆ ವತಿಯಿಂದ ಜಂಟಿ ಸರ್ವೇ ನಡೆಸಿ ಲೋಪದೋಷ ಕಂಡು ಬಂದಲ್ಲಿ ಕಲ್ಲುಕ್ವಾರಿಗಳನ್ನು ಮುಟ್ಟುಗೊಲು ಹಾಕಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಸಭೆಯಲ್ಲಿ ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ವಿನೋದ್. ಪಿಎಸ್‌ಐ ಮುದ್ದು ಮಾದೇವ. ಲೋಕೋಪಯೋಗಿ ಇಲಾಖೆಯ ಎಇಇ ಕುಮಾರ್, ಆರ್‌ಟಿಒ, ಸರ್ವೇ, ಅರಣ್ಯ ಇಲಾಖೆಯ ಅಽಕಾರಿಗಳು ಭಾಗವಹಿಸಿದ್ದರು.

Tags:
error: Content is protected !!