Mysore
27
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಸಿದ್ದರಾಮಯ್ಯ ಹೊಗಳಿದ ಶಾಂತಿದೂತರಿಂದಲೇ ಕಲ್ಲು ತೂರಾಟ: ಸಿ.ಟಿ.ರವಿ ಆಕ್ರೋಶ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಎರಡು ದಿನಗಳ ಹಿಂದೆ ಹಾಡಿ ಹೊಗಳಿದ ಶಾಂತಿದೂತರು ಮಂಡ್ಯದ ಮದ್ದೂರಿಯಲ್ಲಿ ಗಣಪತಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳೇ, ನೀವು ಎರಡು ದಿನದ ಹಿಂದೆ ಹಾಡಿ ಹೊಗಳಿದ ಶಾಂತಿದೂತರು ಮಂಡ್ಯದ ಮದ್ದೂರಿಯಲ್ಲಿ ಗಣಪತಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಸಾಗರದಲ್ಲಿ ಗಣಪತಿಯ ವಿಗ್ರಹಕ್ಕೆ ಉಗುಳುವ ಹೀನ ಕೆಲಸ ಮಾಡಿದ್ದಾರೆ. ಜಾಗತಿಕ ಭಯೋತ್ಪಾದನೆಗೆ ದೊಡ್ಡ ಕೊಡುಗೆ ಕೊಟ್ಟವರು ನೀವು ಹೊಗಳಿದ ಶಾಂತಿದೂತರೇ.

ಭರತಖಂಡದಲ್ಲಿ ಹಿಂದೂಗಳ ಮಾರಣಹೋಮಕ್ಕೆ ಕಾರಣರಾದವರು ನೀವು ಹೊಗಳಿದ ಶಾಂತಿದೂತರೆ. ಭಾರತವನ್ನು ವಿಭಜಿಸುವ ಮೂಲಕ ಅಖಂಡ ಭಾರತವನ್ನು ತುಂಡರಿಸಿದವರ ನೀವು ಹೊಗಳಿದ ಶಾಂತಿದೂತರೆ.

ಈ ನಿಮ್ಮ ಶಾಂತಿದೂತರನ್ನು ನಂಬಿಕೊಂಡಿದ್ದರೆ ಮುಂದೊಂದು ದಿನ ದೇಶದಲ್ಲಿ ಸಂವಿಧಾನದ ಬದಲಿಗೆ ಷರಿಯಾ ಆವರಿಸಿಕೊಂಡಿತು. ರಾಷ್ಟ್ರಧ್ವಜ ಹಾಗೂ ರಾಷ್ಟ್ರಲಾಂಛನವನ್ನು ಗೌರವಿಸಲಾರದವರು ಸಂವಿಧಾನವನ್ನ ಉಳಿಸಿಯಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

Tags:
error: Content is protected !!