Mysore
29
light rain

Social Media

ಬುಧವಾರ, 14 ಜನವರಿ 2026
Light
Dark

ಅರಮನೆಗಿಂತ ಹೆಚ್ಚು ಅರಳಿಮರದಡಿ ಜೀವಿಸುವ ಧಮ್ಮ

ಮಾನಸಗಂಗೋತ್ರಿಯಲ್ಲಿ ಪೂರ್ಣಿಮೆ ಆಚರಣೆಗೆ ದಶಕ

ಇಂದು ಸಂಜೆ ೫ಗಂಟೆಗೆ ‘ಧಮ್ಮ ಪಯಣ’

ಗೌತಮ ಉದ್ಯಾನವನದಲ್ಲಿ ಧ್ಯಾನ, ಗಾಯನ ಕಾರ್ಯಕ್ರಮ

ಮೈಸೂರು: ಗೌತಮ ಬುದ್ಧರ ಚಿಂತನೆಗಳನ್ನು ಬಿತ್ತಲು ಒಂದು ವೈಭವೋಪೇತ ವಾತಾವರಣಬೇಕಿಲ್ಲ. ಅದು ಸರಳವಾಗಿ ಪ್ರಕೃತಿಯಲ್ಲಿಯೇ ಹರಡುತ್ತದೆ. ಹೆಚ್ಚೆಂದರೆ ನಿಮಗೆ ಕುಳಿತು ಮಾತನಾಡಲು ಒಂದು ಮರದ ನೆರಳು ಸಾಕು. ಅರಳಿಮರವಾದರೆ ಇನ್ನೂ ಸ್ವಾದ. ನೀವು ಗಮನಿಸಿ, ಬುದ್ಧರು ಅರಮನೆಯಿಂದ ಅರಳಿಮರದ ಕಡೆಗೆ ನಡೆದು, ಅರಳಿಮರದ ನೆರಳಿನಲ್ಲಿಯೇ ತಮ್ಮ ಬದುಕಿನ ಬಹುಭಾಗವನ್ನು ಕಳೆದರು. ಗಿಡ ಮರ ಬಳ್ಳಿಗಳ ಆಶ್ರಯದಲ್ಲಿ ಧಮ್ಮ ಬೋಧಿಸುತ್ತಾ ಹೊರಟರು. ಹಾಗಾಗಿ ಧಮ್ಮದಲ್ಲಿ ಅರಮನೆಗಿಂತ ಅರಳಿಮರಕ್ಕೆ ಶ್ರೇಷ್ಠವಾದ ಸ್ಥಾನವನ್ನು ಕಲ್ಪಿಸಲಾಗಿದೆ.

೧೩ ವರ್ಷಗಳ ಹಿಂದೆ ಮಾನಸಗಂಗೋತ್ರಿಯಲ್ಲಿ ಪಿಜಿ ವಿದ್ಯಾರ್ಥಿನಿಲಯದ ಮುಂಭಾಗದಲ್ಲಿರುವ ಅರಳಿಮರದ ಕೆಳಗೆ ನೀರವ ವಾತಾವರಣ ಇತ್ತು. ಆದರೆ, ಈಗ ಅಲ್ಲಿ ಗೌತಮ ಬುದ್ಧ ಮತ್ತು ಆತನ ಧಮ್ಮದ ಬೆಳಕು ಪಸರಿಸುವ ಮೂಲಕ ಮಾನವತೆಯ ಬೆಳದಿಂಗಳು ಹರಡಿದಂತಹ ವಾತಾವರಣ ಇರುತ್ತದೆ. ಇದಕ್ಕೆ ಆಗ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಬಿ.ಬಸವರಾಜು ಅವರ ಪರಿಶ್ರಮ ಕಾರಣ. ಅವರೊಂದಿಗೆ ಹಲವರು ಕೈಜೋಡಿಸಿದ್ದರು.

Tags:
error: Content is protected !!