ಮುಂದೆ ಬರಲಿರುವ ನಗರಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರದ ಬದಲಿಗೆ ಓಬಿರಾಯನ ಕಾಲದ ಬ್ಯಾಲೆಟ್ ಪೇಪರ್ ಅನ್ನು ಬಳಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಈವರೆಗೆ ಇವಿಎಂ ಮುಖಾಂತರ ನಡೆದಿರುವ ಚುನಾವಣೆಗಳ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ನಂಬಿಕೆ ಇಲ್ಲವೇ? ಇವಿಎಂ ಬಳಸುವುದರಿಂದ, ಸಮಯ,ಹಣ, ಮಾನವ ಶಕ್ತಿ, ಕಾಗದ ಎಲ್ಲವೂ ಉಳಿತಾಯವಾಗುವುದಿಲ್ಲವೇ? ಚುನಾವಣೆ ಫಲಿತಾಂಶ ಕೆಲವೇ ಗಂಟೆಗಳಲ್ಲಿ ದೊರಕುತ್ತಿಲ್ಲವೇ? ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ಕಾಂಗ್ರೆಸ್ ಪಕ್ಷ ಇವಿಎಂ ವಿರೋಧಿಸುವುದರ ಹಿಂದಿನ ಹುನ್ನಾರಗಳೇನು? ಬ್ಯಾಲೆಟ್ ಪೇಪರ್ ತಯಾರಿಕೆಗಾಗಿ ಮರಗಳನ್ನು ಕಡಿದು ಸರ್ವನಾಶ ಮಾಡಬೇಕೇ? ಇಂತಹ ಸಂಗತಿಗಳೆಲ್ಲವೂ ತಿಳಿದಿದ್ದರೂ ಇವಿಎಂ ಬೇಡ ಎನ್ನುತ್ತಿರುವುದೇಕೆ?ಇಡೀ ವಿಶ್ವವೇ, ತಂತ್ರಜ್ಞಾನ ಬಳಸಿ ಚುನಾವಣೆ ನಡೆಸುತ್ತಿರುವಾಗ,ಕರ್ನಾಟಕ ಸರ್ಕಾರ ಮಾತ್ರ ಓಬಿರಾಯನ ಕಾಲದ ಬ್ಯಾಲೆಟ್ ಪೇಪರ್ ಬಳಸಲು ಮುಂದಾಗಿರುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ.
-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು





