Mysore
18
clear sky

Social Media

ಗುರುವಾರ, 22 ಜನವರಿ 2026
Light
Dark

ಶಿವರಾಜಕುಮಾರ್ ಅಭಿನಯದ ‘ಬೇಲ್‍’ ಪ್ರಾರಂಭ: KVN ಪ್ರೊಡಕ್ಷನ್ಸ್ ನಿರ್ಮಾಣ

bail shivaraj kumar

ಶಿವರಾಜಕುಮಾರ್ ಅಭಿನಯದಲ್ಲಿ ಪವನ್‍ ಒಡೆಯರ್ ಒಂದು ಚಿತ್ರ ನಿರ್ಮಿಸಿ-ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕಳೆದ ವರ್ಷದ ಕೊನೆಯಲ್ಲಿ ಬಂದಿತ್ತು. ಆ ಚಿತ್ರಕ್ಕೆ ‘ಬೇಲ್‍’ (ಜಾಮೀನು’) ಎಂದು ಹೆಸರಿಡಲಾಗಿದ್ದು ಇಡಲಾಗಿದ್ದು, ಶುಕ್ರವಾರ ಮುಹೂರ್ತವಾಗಿದೆ.

‘ಬೇಲ್‍’ ಚಿತ್ರದ ಮುಹೂರ್ತ ಸಮಾರಂಭ ಪಂಚಮುಖ ಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ನೆರವೇರಿತು. ಈ ಸಂದರ್ಭದಲ್ಲಿ ಶಿವರಾಜಕುಮಾರ್, ಗೀತಾ ಶಿವರಾಜಕುಮಾರ್, ಪವನ್ ಒಡೆಯರ್, ಕೆ. ವೆಂಕಟನಾರಾಯಣ್‍ ಮುಂತಾದವರು ಹಾಜರಿದ್ದರು.

ವಿಶೇಷವೆಂದರೆ, ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ ‘ಟಾಕ್ಸಿಕ್’, ‘ಕೆಡಿ – ದಿ ಡೆವಿಲ್‍’, ‘ಜನ ನಾಯಗನ್’ ಮುಂತಾದ ದೊಡ್ಡ ಬಜೆಟ್‍ ಚಿತ್ರಗಳನ್ನು ನಿರ್ಮಿಸುತ್ತಿರುವ KVN ಪ್ರೊಡಕ್ಷನ್ಸ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದೆ. ವಿಶೇಷವೆಂದರೆ, ಕಳೆದ ಒಂದು ವಾರದಲ್ಲಿ ಕೆ.ವಿ.ಎನ್‍ ಸಂಸ್ಥೆಯಿಂದ ಘೋಷಣೆಯಾಗುತ್ತಿರುವ ಮೂರನೆಯ ಚಿತ್ರ ಇದು. ಇದಕ್ಕೂ ಮೊದಲು ಕಳೆದ ಶುಕ್ರವಾರ ಚಿರಂಜೀವಿ ಅಭಿನಯದ ಚಿತ್ರವನ್ನು ಕೆವಿಎನ್‍ ಘೋಷಿಸಿತ್ತು. ಅದರ ಮರುದಿನವೇ ಅಕ್ಷಯ್‍ ಕುಮಾರ್ ಮತ್ತು ಸೈಫ್‍ ಅಲಿ ಖಾನ್‍ ಅಭಿನಯದಲ್ಲಿ ‘ಹೈವಾನ್‍’ ಎಂಬ ಚಿತ್ರ ಪ್ರಾರಂಭಿಸಿತ್ತು. ಈಗ ‘ಬೇಲ್‍’ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಈ ಚಿತ್ರವನ್ನು ವೆಂಕಟನಾರಾಯಣ್‍ ಮತ್ತು ಪವನ್‍ ಒಡೆಯರ್‍ ಜೊತೆಯಾಗ ಿನಿರ್ಮಿಸುತ್ತಿದ್ದರೆ ಎಂದು ಹೇಳಲಾಗಿದೆ.

‘ಬೇಲ್‍’ ಒಂದು ಕ್ರೈಮ್‍ ಥ್ರಿಲ್ಲರ್ ಚಿತ್ರವಾಗಿದ್ದು, ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ 3ರಿಂದ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್ ನಡೆಯಲಿದ್ದು, ನಂತರದ ದಿನಗಳಲ್ಲಿ ಮಂಡ್ಯ, ಹಿಮಾಚಲ ಪ್ರದೇಶ, ಮುಂಬೈ ಹಾಗೂ ಹೈದರಾಬಾದ್‍ನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಚಿತ್ರದಲ್ಲಿ ಶಿವರಾಜಕುಮಾರ್ ಜೊತೆಗೆ ಜಯರಾಮ್, ಸಾಯಿಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಪ್ರಕಾಶ್ ಬೆಳವಾಡಿ, ಸಂಜನಾ ಆನಂದ್, ದೀಕ್ಷಿತ್ ಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಶಶಾಂಕ್ ನಾರಾಯಣ್ ಸಂಕಲನವಿದೆ.

Tags:
error: Content is protected !!