Mysore
25
overcast clouds

Social Media

ಸೋಮವಾರ, 04 ಮೇ 2026
Light
Dark

ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲಿ 3 ತಲ್ವಾರ್‌ಗಳು ಪತ್ತೆ

mahesh shetty timrodi

ಬೆಳ್ತಂಗಡಿ: ಉಜಿರೆಯಲ್ಲಿರುವ ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದು, ಮೂರು ತಲ್ವಾರ್‌ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಮಹೇಶ್‌ ಶೆಟ್ಟಿ ತಿಮರೋಡಿ ಪತ್ನಿ, ಮಗ ಹಾಗೂ ಮಗಳ ಮೊಬೈಲ್‌ ಹಾಗೂ ಕೆಲವು ದಾಖಲೆಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಶೋಧ ನಡೆಸುವ ವೇಳೆ ಮೂರು ತಲ್ವಾರ್‌ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಅದೇ ರೀತಿ ಸಿಸಿಟಿವಿ ಹಾರ್ಡ್‌ ಡಿಸ್ಕ್‌ ಸೇರಿದಂತೆ ಹಲವು ವಸ್ತುಗಳನ್ನು ಎಸ್‌ಐಟಿ ಜಪ್ತಿ ಮಾಡಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನನ್ನು ಕರೆತಂದು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದು, ಚಿನ್ನಯ್ಯನ ಮೊಬೈಲ್‌ ಕೂಡ ಪತ್ತೆಯಾಗಿದೆ.

ದೂರುದಾರ ಚಿನ್ನಯ್ಯ ಈ ಹಿಂದೆ ಮಹೇಶ್‌ ಶೆಟ್ಟಿ ಮನೆಯಲ್ಲಿ ತಂಗಿದ್ದನು. ಈ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನು ಕರೆದುಕೊಂಡು ಬಂದು ಎಸ್‌ಐಟಿ ಶೋಧ ನಡೆಸಿದೆ. ಚಿನ್ನಯ್ಯ ತಂಗಿದ್ದ ರೂಮಿನಲ್ಲಿ ಎಸ್‌ಐಟಿ ತೀವ್ರ ಶೋಧ ನಡೆಸಿದೆ.

Tags:
error: Content is protected !!