Mysore
20
broken clouds

Social Media

ಮಂಗಳವಾರ, 13 ಜನವರಿ 2026
Light
Dark

ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆ ರಕ್ಷಣೆ

ಮಂಜು ಕೋಟೆ

ಕೇರಳದ ಅರಣ್ಯಪ್ರದೇಶದಿಂದ ಕಬಿನಿ ನದಿ ದಾಟಿ ಕೋಟೆ ಗಡಿಭಾಗಕ್ಕೆ ಬಂದ ಮರಿಯಾನೆ 

ಎಚ್.ಡಿ.ಕೋಟೆ: ತಾಯಿ ಆನೆಯಿಂದ ಬೇರ್ಪಟ್ಟು ಮಂಗಳವಾರ ಕೇರಳದ ಶಾಲೆಯೊಂದರ ಆವರಣದಲ್ಲಿ ಕಾಣಿಸಿಕೊಂಡಿದ್ದ ಮರಿಯಾನೆ ಬುಧವಾರ ತಾಲ್ಲೂಕಿನ ಗಡಿ ಭಾಗದ ಗ್ರಾಮದಲ್ಲಿ ಕಾಣಿಸಿ ಕೊಂಡಿದ್ದು, ಮರಿಯಾನೆಯ ಸ್ಥಿತಿ ನೋಡಿ ಪ್ರಾಣಿಪ್ರಿಯರು ಮರುಗಿದ್ದಾರೆ.

ಕಬಿನಿ ನದಿ ಪಕ್ಕದಲ್ಲಿರುವ ಕೇರಳದ ಸುಲ್ತಾನ್ ಬತ್ತೇರಿ, ಪುಲಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆ ಆವರಣ ದಲ್ಲಿ ಹಾಡ ಹಗಲೇ ಹೆಣ್ಣಾನೆ ಮರಿ ಕಾಣಿಸಿಕೊಂಡಿತ್ತು. ನಂತರ ಅಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು, ನೌಕರರು ಅದನ್ನು ಸೆರೆಹಿಡಿದು ಆಟೋದಲ್ಲಿ ತೆಗೆದುಕೊಂಡು ಹೋಗಿದ್ದರು. ಅದಾದ ಮರುದಿನವೇ, ಕಬಿನಿ ನದಿ ದಾಟಿ ಕರ್ನಾಟಕದ ಗಡಿಗೆ ಬಂದು ಎಚ್. ಡಿ.ಕೋಟೆ ತಾಲ್ಲೂಕಿನ ಬಳ್ಳೆ ಸಮೀಪದ ಒಡಕನಮಾಳ ಕಡೆ ಗದ್ದೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.

ಸುಮಾರು ೩ ವರ್ಷದ ಈ ಹೆಣ್ಣಾನೆ ಮರಿ ಎರಡು ದಿನಗಳ ಹಿಂದೆ ತಾಯಿಯಿಂದ ಬೇರ್ಪಟ್ಟು ಕೇರಳದ ಪುಲಹಳ್ಳಿಯ ಸರ್ಕಾರಿ ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳ ಪಾದರಕ್ಷೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಆಟ ವಾಡುತ್ತಿದ್ದನ್ನು ಗಮನಿಸಿ ಅಲ್ಲಿನ ಅರಣ್ಯ ಸಿಬ್ಬಂದಿ ಆನೆ ಮರಿಯನ್ನು ರಕ್ಷಿಸಿ, ಅದನ್ನು ತಾಯಿಯ ಮಡಿಲಿಗೆ ಸೇರಿಸಲೆಂದು ಅರಣ್ಯಕ್ಕೆ ಬಿಟ್ಟಿದ್ದರು. ಆದರೆ, ತುಂಬಿ ಹರಿಯುತ್ತಿರುವ ಕಬಿನಿ ನದಿಯನ್ನು ದಾಟಿ ಕರ್ನಾಟಕದ ಗಡಿಭಾಗದ ಗ್ರಾಮಕ್ಕೆ ಬಂದಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕೇರಳ ರಾಜ್ಯದ ಅರಣ್ಯ ಅಧಿಕಾರಿಗಳು ತಾಯಿ ಆನೆ ಜೊತೆ ಮರಿಯನ್ನು ಸೇರಿಸುವ ಕೆಲಸವನ್ನು ಮಾಡದೆ ರಾತ್ರೋರಾತ್ರಿ ಆನೆ ಮರಿಯನ್ನು ತೆಪ್ಪದ ಮೂಲಕ ಕಬಿನಿ ನದಿ ದಾಟಿಸಿ ಕರ್ನಾಟಕ ರಾಜ್ಯದ ಗಡಿಭಾಗಕ್ಕೆ ಬಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವಲಯದ ಅರಣ್ಯ ಅಧಿಕಾರಿ ಹನುಮಂತರಾಜು ಹಾಗೂ ಸಿಬ್ಬಂದಿ ಆನೆ ಮರಿಯನ್ನು ರಕ್ಷಣೆ ಮಾಡಿ, ಅದರ ತಾಯಿ ಆನೆಯ ಬರುವಿಕೆಗಾಗಿ ಅರಣ್ಯ ಪ್ರದೇಶದಲ್ಲಿ ಮರಿಯೊಂದಿಗೆ ಕಾದಿದ್ದರು. ಆದರೆ ಬುಧವಾರವೂ ಕೇರಳ ಅರಣ್ಯ ಪ್ರದೇಶದಿಂದ ತಾಯಿ ಆನೆ ನದಿ ದಾಟಿ ಬಾರದೇ ಇದ್ದುದರಿಂದ ಮರಿ ಆನೆಯನ್ನು ಪೋಷಣೆ ಮಾಡಿ ಬಳ್ಳೆ ಅರಣ್ಯ ಸಾಕಾನೆ ಕೇಂದ್ರಕ್ಕೆ ಬಿಟ್ಟಿದ್ದಾರೆ.

Tags:
error: Content is protected !!