Mysore
20
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಗಾಜಿನ ಮನೆಯಲ್ಲಿ ಗಾಂಧಿ ತತ್ವ

ಕೆ.ಬಿ.ರಮೇಶನಾಯಕ

ಪುಷ್ಪಗಳಲ್ಲಿ ಅರಳಲಿದೆ ಸಬರಮತಿ ಆಶ್ರಮದ ಮಾದರಿ

ಕುಪ್ಪಣ್ಣಪಾರ್ಕ್‌ನಲ್ಲಿ ೧೧ ದಿನಗಳ ದಸರಾ ಫಲಪುಷ್ಪ ಪ್ರದರ್ಶನ 

ಮೈಸೂರು: ಲಕ್ಷಾಂತರ ಪುಷ್ಪಪ್ರಿಯರನ್ನು ಕೈಬೀಸಿ ಕರೆಯುವ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ತತ್ವಗಳು, ವಿಚಾರಧಾರೆಗಳು ಅನಾವರಣಗೊಳ್ಳಲಿವೆ.

ನಗರದ ಕುಪ್ಪಣ್ಣ ಪಾರ್ಕ್‌ನ ಗಾಜಿನ ಮನೆಯೊಳಗೆ ಗಾಂಧೀಜಿ ಮತ್ತು ಅವರ ತತ್ವಗಳ ಅಶಯಗಳಡಿ ಸಬರಮತಿ ಆಶ್ರಮದ ಮಾದರಿ ನಿರ್ಮಾಣ ವಾಗಲಿದೆ. ಈಗಾಗಲೇ ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್ ಅವರ ಸಮ್ಮುಖದಲ್ಲಿ ಸಭೆ ನಡೆದಿದ್ದು, ಪರಿಕಲ್ಪನೆಗಳನ್ನು ೨ ದಿನಗಳೊಳಗೆ ಸಲ್ಲಿಸುವಂತೆ ಹೇಳಲಾಗಿದೆ.

ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಸೆ.೨೨ರಿಂದ ಅ.೨ ರವರೆಗೆ ನಡೆಯ ಲಿರುವ ಫಲಪುಷ್ಪ ಪ್ರದರ್ಶನಕ್ಕೆ ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆಸುವ ಕೆಲಸ ನಡೆಯುತ್ತಿದೆ.

ಸರ್ಕಾರಿ ಅತಿಥಿಗೃಹ, ಕುಕ್ಕರಹಳ್ಳಿ ಕೆರೆ, ನಜರ್ ಬಾದ್, ಯಲಚಹಳ್ಳಿ ಸೇರಿದಂತೆ ೧೨ ತೋಟಗಾರಿಕೆ ಇಲಾಖೆಗೆ ಸೇರಿದ ಸಸ್ಯವನಗಳಲ್ಲಿ ವಿವಿಧ ಜಾತಿಯ ಹೂವುಗಳನ್ನು ಬೆಳೆಸಲಾಗುತ್ತಿದೆ.

ಈ ಬಾರಿ ಅಕ್ಟೋಬರ್ ೨, ಗಾಂಧಿ ಜಯಂತಿ ದಿನದಂದು ವಿಜಯದಶಮಿ ಮೆರವಣಿಗೆ ಬಂದಿರುವ ಕಾರಣ ಗಾಂಽಜಿ ಮತ್ತು ತತ್ವಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ, ಕುಪ್ಪಣ್ಣ ಪಾರ್ಕ್‌ನಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಆಕರ್ಷಿಸುವಂತೆ ಮಾಡಲು ಗಾಜಿನ ಮನೆಯೊಳಗೆ ಮಹಾತ್ಮ ಗಾಂಧಿ ಮತ್ತು ಅವರ ತತ್ವಗಳನ್ನು ಕುರಿತು ವಿನ್ಯಾಸವನ್ನು ಅಂತಿಮಗೊಳಿಸುವ ಕೆಲಸ ನಡೆಯುತ್ತಿದೆ. ಜಿಪಂ ಸಿಇಒ ಸಮ್ಮುಖದಲ್ಲಿ ವಿವಿಧ ಸಂಸ್ಥೆಯವರು ಹೂವಿನ ಪರಿಕಲ್ಪನೆಗಳ ಸಂಕ್ಷಿಪ್ತ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಮತ್ತೊಂದು ಸಭೆ ನಡೆಸಿದ ಬಳಿಕ ವಿನ್ಯಾಸ ಅಂತಿಮಪಡಿಸಲಾಗುತ್ತದೆ ಎಂದು ಹೇಳಲಾಗಿದೆ.

ಅಂತಿಮಗೊಂಡ ಬಳಿಕ ಟೆಂಡರ್: ಗಾಂಧೀಜಿ ಮತ್ತು ಅವರ ತತ್ವಗಳ ಪರಿಕಲ್ಪನೆ, ಇದರ ಜತೆಗೆ, ಕುಪ್ಪಣ್ಣ ಉದ್ಯಾನವನದ ಆವರಣದಲ್ಲಿ ವಿವಿಧ ಪರಿಕಲ್ಪನೆಗಳ ವಿನ್ಯಾಸ ಅಂತಿಮವಾದ ಬಳಿಕ ಟೆಂಡರ್ ಕರೆಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

” ಗಾಂಧೀಜಿ ಮತ್ತು ಅವರ ತತ್ವಗಳ ಪರಿಕಲ್ಪನೆ ಮೇಲೆ ಗಾಜಿನ ಮನೆಯೊಳಗೆ ಸಬರಮತಿ ಆಶ್ರಮದ ವಿನ್ಯಾಸ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಸಿಇಒ ಅವರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ. ವಿನ್ಯಾಸ ಅಂತಿಮವಾದ ಮೇಲೆ ಟೆಂಡರ್ ಪ್ರಕ್ರಿಯೆ ಶುರು ಮಾಡುತ್ತೇವೆ.”

-ಮಂಜುನಾಥ್ ಅಂಗಡಿ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ

ಒಂದು ಲಕ್ಷ ಹೂವಿನ ಕುಂಡಗಳು: ಫಲ ಪುಷ್ಪ ಪ್ರದರ್ಶನವು ಒಂದು ಲಕ್ಷಕ್ಕೂ ಹೆಚ್ಚು ಹೂವಿನ ಕುಂಡಗಳನ್ನು ಒಳಗೊಂಡಿರು ತ್ತದೆ, ಇದರಲ್ಲಿ ವೈವಿಧ್ಯಮಯ ಸಸ್ಯಗಳನ್ನು ಪ್ರದರ್ಶಿಸಲಾಗುತ್ತದೆ. ಈ ವರ್ಷ ಸೇರ್ಪಡೆಯಾದ ಕೆಲವು ವಿಲಕ್ಷಣ ಪ್ರಭೇದ ಗಳೆಂದರೆ ಪೊಯಿನ್‌ಸೆಟ್ಟಿಯಾ, ಕಲಾಂಚೊ, ಕರ್ಕುಮಾ, ಆಕ್ಸಾಲಿಸ್, ಹೈಡ್ರೇಂಜ, ರೋಸ್, ಅಜೆಲಿಯಾ, ಡ್ಯಾನ್ಸಿಂಗ್ ಡಾಲ್, ಆಫ್ರಿಕನ್ ವೈಲೆಟ್, ಡಿಸ್ ಬಡ್ಸ್, ಅಸಹನೆ, ಲಿಸಿಯಾಂಥಸ್, ಹೈಬಿಸ್ಕಸ್, ಪೆಂಟಾಸ್ ಕಾರ್ನಿಯಾ, ಗ್ಲೋಕ್ಸಿಯಮ್, ಬೆರ್ಗೊ ಯಾಕ್ಸ್, ಡಿಮೆಲ್‌ರೊಬಿಯಮ್ಸ್, ಲಿಲ್ಲಿ, ಆರ್ಕಿಡ್ ಮತ್ತು ಕ್ಲೆರೊಡೆಂಡ್ರಮ್.

Tags:
error: Content is protected !!