ನಂಜನಗೂಡು : ಎರಡು ಕುಟುಂಬದ ನಡುವಿನ ಸಾಮಾನ್ಯ ವಿಷಯವನ್ನೇ ದೊಡ್ಡದು ಮಾಡಿಕೊಂಡು ಸಾರ್ವಜನಿಕ ಆಸ್ಪತ್ರೆ ಬಳಿ ಲಾಂಗ್ ಹಾಗೂ ತಲವಾರ್ ಬೀಸಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜನರಲ್ಲಿ ಭೀತಿ ಹುಟ್ಟಿಸಿ ಪರಾರಿಯಾಗಿದ್ದ ನಾಲ್ವರನ್ನು ವಶಕ್ಕೆ ಪಡೆಯುವಲ್ಲಿ ನಂಜನಗೂಡು ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಸಾರ್ವಜನಿಕರ ಮುಂದೆಯೇ ಲಾಂಗ್ ಮತ್ತು ತಲವಾರ್, ರಿಪ್ಪೀಸ್ ಪಟ್ಟಿಗಳಿಂದ ರವಿ ಮತ್ತು ಅಭಿಷೇಕ್ ಎಂಬವರ ಮೆಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಸುಬ್ಬು ಹಾಗೂ ಮಂಟಿಯನ್ನು ಭಾನುವಾರ ರಾತ್ರಿಯೇ ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಸೋಮವಾರ ಆಕಾಶ್, ಓರ್ವ ಬಾಲಕನನ್ನು ಕೂಡ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದು ಅವರ ವಿರುದ್ಧ ಕಾನೂನಿನ ಕುಣಿಕೆ ಬಿಗಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಕನನ್ನು ಬಾಲಪರಾಧಿ ನಿಲಯಕ್ಕೆ ಕಳಿಸಲಾಗಿದ್ದು, ಸುಭಾಷ್ ಅಲಿಯಾಸ್ ಸುಬ್ಬು, ಆಕಾಶ, ಮಂಟಿ ಎಂಬ ಮೂವರೂ ಈಗ ಜೈಲಿನ ಅತಿಥಿಗಳಾಗಿದ್ದಾರೆ.





