Mysore
15
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

30 ಕೆಜಿ ಶ್ರೀಗಂಧದ ತುಂಡುಗಳು ವಶ : ಓರ್ವ ಬಂಧನ

30 Kg of Sandalwood Seized: One Person Arrested

ಕುಶಾಲನಗರ : ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳಿಲುಗುಪ್ಪೆ ಗ್ರಾಮದ ಬಸ್ ತಂಗುದಾಣದಲ್ಲಿ ಅಂದಾಜು 30 ಕೆಜಿ ಶ್ರೀಗಂಧದ ತುಂಡುಗಳನ್ನು ಸಾಗಾಟ ಮಾಡಲು ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.

ಬಾಣವಾರ ಉಪ ವಲಯ ಅರಣ್ಯ ಅಧಿಕಾರಿಗೆ ದೊರೆತ ಮಾಹಿತಿಯ ಮೇರೆಗೆ ದಾಳಿ ಮಾಡಿ ಆರೋಪಿ ಶನಿವಾರಸಂತೆ ಹೊಲಗುಂದ ನಿವಾಸಿ ಪ್ರತಾಪ್ ಎಂಬಾತನನ್ನು ಬಂಧಿಸಿ ಮಾಲು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಬಾಣವಾರ ಉಪ ವಲಯ ಅರಣ್ಯಾಧಿಕಾರಿ ಶ್ರವಣಕುಮಾರ್, ಗಸ್ತು ವನಪಾಲಕ ಈರಣ್ಣ, ಪ್ರವೀಣ್ ಕುಮಾರ್, ಸಿಬ್ಬಂದಿಗಳಾದ ವೇದ, ಪ್ರವೀಣ್, ಸಂತೋಷ್, ನಾಗರಾಜ್, ಸಂಜಯ್, ಧರ್ಮ ಪಾಲ್ಗೊಂಡಿದ್ದರು.

Tags:
error: Content is protected !!