ಗರಿ.. ಸ್ವಚ್ಛ ನಗರಿ !
ಅಂದ ಚಂದದ ಊರು
ನಮ್ಮ ಹೆಮ್ಮೆಯ ಮೈ‘ಸೂರು’
ಸಾಂಸ್ಕೃತಿಕ ನಗರಿಯ ಕೀರ್ತಿ ಕಿರೀಟಕ್ಕೆ
ಮತ್ತೊಮ್ಮೆ ಬಂದಿದೆ
ಸ್ವಚ್ಛ ನಗರಿ ಎಂಬ ಸಿರಿ ಗರಿ !
(ಮೈಸೂರಿಗೆ ಮೂರನೇ ಸ್ಥಾನ)
ಇರಲಿಲ್ಲವೆಂದಲ್ಲ ಮೈಸೂರಿಗರಿಗೆ
ಪ್ರಥಮ ಸ್ಥಾನದ ಗುರಿ,
ಸ್ವಚ್ಛತೆ ಕಾಪಾಡುವಲ್ಲಿ…
ಮೈಸೂರಿಗಿಂತಲೂ ಒಂದು ಹೆಜ್ಜೆ
ನಾವೇ ಮುಂದು
ಎನ್ನುತ್ತಿರುವ
ಮಧ್ಯಪ್ರದೇಶದ ಊರು
ಆ… ಇಂದೋರು !
-ಮ.ಗು.ಬಸವಣ್ಣ, ಜೆ ಎಸ್ ಎಸ್ ಬಡಾವಣೆ, ಮೈಸೂರು





