Mysore
28
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಮೈಸೂರು| ಜಿಟಿ ಜಿಟಿ ಮಳೆಯಲ್ಲಿ ಹುಲಿರಾಯನ ಆಟ: ಪ್ರವಾಸಿಗರ ಕ್ಯಾಮರಾದಲ್ಲಿ ದೃಶ್ಯ ಸೆರೆ

ಮೈಸೂರು: ಜಿಲ್ಲೆಯ ಕಬಿನಿ ಹಿನ್ನೀರಿನಲ್ಲಿ ಜಿಟಿ ಜಿಟಿ ಮಳೆಯ ನಡುವೆ ಕೆರೆಯಲ್ಲಿ ಹುಲಿಯೊಂದು ಆಟವಾಡುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.

ದಮ್ಮನಕಟ್ಟೆ ಸಫಾರಿ ವೇಳೆ ಕೆರೆಯೊಂದರಲ್ಲಿ ಹುಲಿರಾಯ ಮಳೆಗೆ ಮೈಯೊಡ್ಡಿ ಕುಳಿತು ಸುಮಾರು ಎರಡು ಗಂಟೆಗಳ ಕಾಲ ಆಟವಾಡಿದ್ದಾನೆ. ಈ ದೃಶ್ಯವನ್ನು ಕಂಡು ಸಫಾರಿಗೆ ತೆರಳಿದ್ದ ಪ್ರವಾಸಿಗರು ಫುಲ್‌ ಖುಷ್‌ ಆಗಿದ್ದಾರೆ. ಹುಲಿಯ ಆಟದ ದೃಶ್ಯ ಅನುಪ್ ರವಿಶಂಕರ್ ಎಂಬುವವರ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿದೆ.

ಇನ್ನು ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವ ಪರಿಣಾಮ ಕಾಡು ಹಚ್ಚಹಸಿರಿನಿಂದು ಕೂಡಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ವೀಕೆಂಡ್‌ ಬಂದರೆ ಸಾಕು ಪ್ರವಾಸಿಗರು ಸಫಾರಿಗೆ ತೆರಳುತ್ತಿದ್ದು, ಪ್ರಕೃತಿ ಸೌಂದರ್ಯ ಸವಿಯುವುದರ ಜೊತೆಗೆ ವನ್ಯಜೀವಿಗಳನ್ನು ಕಣ್ತುಂಬಿಕೊಂಡು ಎಂಜಾಯ್‌ ಮಾಡುತ್ತಿದ್ದಾರೆ.

Tags:
error: Content is protected !!