Mysore
28
few clouds

Social Media

ಶುಕ್ರವಾರ, 02 ಜನವರಿ 2026
Light
Dark

ಕೆಟ್ಟುನಿಂತ ಸಿಗ್ನಲ್ ಲೈಟ್: ಸವಾರರಿಗೆ ಸಂಚಕಾರ

ಪ್ರಶಾಂತ್ ಎಸ್.

ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುತ್ತಿರುವ ಪಾದಚಾರಿಗಳು; ಸಿಗ್ನಲ್ ಲೈಟ್ ದುರಸ್ತಿಪಡಿಸಲು ಆಗ್ರಹ

ಮೈಸೂರು: ಸಂಚಾರ ದಟ್ಟಣೆ ಹೋಗಲಾಡಿಸಿ ಸುಗಮ ಸಂಚಾರ ವ್ಯವಸ್ಥೆಗಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಸಿಗ್ನಲ್ ಲೈಟ್‌ಗಳು ಹಲವೆಡೆ ಕೆಟ್ಟು ನಿಂತ ಪರಿಣಾಮವಾಗಿ ವಾಹನ ಸವಾರರು ಪರ ದಾಡ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸಂಚಾರ ಬೂತ್ಗಳಲ್ಲಿ ಪೊಲೀಸರು ಇಲ್ಲದೇ ಇಲ್ಲದಿರುವು ದರಿಂದ ವಾಹನಗಳು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದು, ರಸ್ತೆಯಲ್ಲಿ ಸಾಗುವ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವಂತಾಗಿದೆ.

ಕಳೆದ ೧೫ ದಿನಗಳಿಂದ ನಗರದ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ದೀಪಗಳ ಸಮಸ್ಯೆಯಾಗಿದ್ದು, ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಗ್ನಲ್ ಲೈಟ್ ಸ್ಥಗಿತ: ವಿಜಯನಗರ ಎರಡನೇ ಹಂತ ಹಾಗೂ ನಾಲ್ಕನೇ ಹಂತದ ಸಮೀಪವಿರುವ ವೃತ್ತಗಳಲ್ಲಿ ಐದು ರಸ್ತೆಗಳು ಸಂಪರ್ಕಿಸುತ್ತವೆ. ಒಂದು ರಸ್ತೆ ಹುಣಸೂರಿಗೆ, ಮತ್ತೊಂದು ಹೆಬ್ಬಾಳ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವುದರಿಂದ ವಾಹನಗಳ ಸಂಚಾರ ಅಧಿಕವಾಗಿದ್ದು, ಸಂಜೆ ೫ ಗಂಟೆಯ ನಂತರ ಮತ್ತು ಬೆಳಿಗ್ಗೆ ೮ ಗಂಟೆ ಬಳಿಕ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಆದರೆ, ಇಲ್ಲಿನ ಸಿಗ್ನಲ್ ಲೈಟ್‌ಗಳು ಕೆಟ್ಟು ನಿಂತಿರುವುದರಿಂದ ಏಕಕಾಲಕ್ಕೆ ವಾಹನಗಳು ನುಗ್ಗುವುದರಿಂದ ಅಪಘಾತಗಳಾಗುತ್ತಿವೆ.

ಹಲವೆಡೆ ಸಿಗ್ನಲ್ ಲೈಟ್ ಸಮಸ್ಯೆ: ಜಲಪುರಿಯ ಎಸ್‌ಪಿ ಕಚೇರಿ, ಗಾಯತ್ರಿಪುರಂ, ದಟ್ಟಗಳ್ಳಿಯ ನೇತಾಜಿ ವೃತ್ತ, ನಾಚನಹಳ್ಳಿ ಪಾಳ್ಯ ಸಮೀಪವಿರುವ ಟೋಲ ಗೇಟ್ ವೃತ್ತ.. ಹೀಗೆ ಹಲವು ಕಡೆಗಳಲ್ಲಿ ಇದೇ ರೀತಿಯ ಸಮಸ್ಯೆಗಳಾಗಿವೆ. ಕೆಲವೆಡೆ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಸಂಚಾರ ಪೊಲೀಸರನ್ನೂ ನಿಯೋಜಿಸಿಲ್ಲ. ಇದರಿಂದ ಪಾದಚಾರಿಗಳು ರಸ್ತೆ ದಾಟಲು ತೊಂದರೆ ಅನುಭವಿಸು ವಂತಾಗಿದೆ.

” ನಗರದ ಹಲವೆಡೆ ಸಿಗ್ನಲ್ ದೀಪಗಳು ಚಾಲ್ತಿಯಲ್ಲಿದ್ದು, ಎಲ್ಲೆಲ್ಲಿ ಕೆಟ್ಟುನಿಂತಿವೆ ಹಾಗೂ ಇನ್ನೂ ಯಾವ ಭಾಗದಲ್ಲಿ ಸಿಗ್ನಲ್ ದೀಪಗಳ ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಿ ಸರಿಪಡಿ ಸುವ ಮೂಲಕ ಸಾರ್ವಜನಿಕರು ಹಾಗೂ ವಾಹನ ಸವಾರರು ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡಲಾಗುವುದು.”

-ಕೆ.ಎಸ್.ಸುಂದರ್‌ರಾಜ್, ಡಿಸಿಪಿ ನಗರ ಪೊಲೀಸ್ ಅಪರಾಧ ಮತ್ತು ಸಂಚಾರ ವಿಭಾಗ 

” ಸಿಗ್ನಲ್ ಲೈಟ್‌ಗಳು ಯಾವಾಗ ಬೇಕಾದರೂ ಹೋಗುತ್ತದೆ, ಯಾವಾಗ ಬೇಕಾದರೂ ಬರುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬೈಕ್ ಓಡಿಸುವಾಗಲೂ ಟ್ರಾಫಿಕ್ ಸಮಸ್ಯೆಯಾಗಿ ಅಪಘಾತಗಳು ಸಂಭವಿಸಿವೆ. ಹಾಗಾಗಿ ಪೊಲೀಸ್ ಇಲಾಖೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದರೆ ತೊಂದರೆಗಳನ್ನು ತಪ್ಪಿಸಬಹುದು.”

-ಆದರ್ಶ್, ಬೈಕ್ ಸವಾರ

Tags:
error: Content is protected !!