Mysore
24
clear sky

Social Media

ಶನಿವಾರ, 24 ಜನವರಿ 2026
Light
Dark

ಟ್ರ್ಯಾಕ್ಟರ್ ಓಡಿಸುತ್ತಿದ್ದ ಸೆಲ್ವಿನ್ ಹೀರೋ ಆದಾಗ; ‘ದೇವಸಸ್ಯ’ ಟೈಟಲ್ ಟೀಸರ್ ಬಿಡುಗಡೆ

devasasya kannada movie teaser (1)

ಈ ಹಿಂದೆ ಬಸ್‍, ಆಟೋ ಓಡಿಸುತ್ತಿದ್ದ ಹಲವರು ಕನ್ನಡ ಚಿತ್ರರಂಗದಲ್ಲಿ ಹೀರೋಗಳಾಗಿ ಮಿಂಚಿದ್ದಾರೆ. ಇದೀಗ ಟ್ರ್ಯಾಕ್ಟರ್ ಓಡಿಸಿಕೊಂಡಿದ್ದ ಯುವಕನೊಬ್ಬ ಸದ್ದಿಲ್ಲದೆ ಹೀರೋ ಆಗಿದ್ದಾರೆ. ಕನ್ನಡದಲ್ಲಿ ‘ದೇವಸಸ್ಯ’ ಎಂಬ ಚಿತ್ರ ಸದ್ದಿಲ್ಲದೆ ನಿರ್ಮಾಣವಾಗುತ್ತಿದ್ದು, ಈ ಚಿತ್ರದ ಮೂಲಕ ಸೆಲ್ವಿನ್‍ ದೇಸಾಯಿ ಹೀರೋ ಆಗುತ್ತಿದ್ದಾರೆ.

‘ದೇವಸಸ್ಯ’ ಒಂದು ಅಪರೂಪದ ಗಿಡದ ಸುತ್ತ ನಡೆಯುವ ಘಟನೆಗಳ ಗುಚ್ಛ. ಬಹುತೇಕ ಉತ್ತರ ಕನ್ನಡದವರೇ ಸೇರಿ ಮಾಡಿರುವ ಪ್ಯಾನ್ ಇಂಡಿಯಾ ಚಿತ್ರವಿದು. ಈ ಚಿತ್ರವನ್ನು ಅನಂತ ಫಿಲಂಸ್ ಅಡಿಯಲ್ಲಿ ಅನಂತಕುಮಾರ್ ಹೆಗಡೆ ನಿರ್ಮಿಸಿದರೆ, ಕಾರ್ತಿಕ್‍ ಭಟ್‍ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ನಟ-ನಿರ್ದೇಶಕ ನವೀನ್‍ ಕೃಷ್ಣ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

ನಿರ್ದೇಶಕ ಕಾರ್ತೀಕ್ ಭಟ್ ಮಾತನಾಡಿ, `ಕೆಲವು ಸಿನಿಮಾ ಮತ್ತು ಧಾರಾವಾಹಿಗಳಿಗೆ ಬರಹಗಾರನಾಗಿ ಕೆಲಸ ಮಾಡಿದ್ದೇನೆ. ಶಿರಸಿ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಸಮುದಾಯದ ಕಥೆಯಿದು. ಇದು ಎರಡು ಊರುಗಳ ಮಧ್ಯೆ ನಡೆಯುವ ಕಥೆ. ಸಿದ್ದಿ ಹುಡುಗನ ಪಾತ್ರವನ್ನು ಸೆಲ್ವಿನ್ ದೇಸಾಯಿ ಮಾಡಿದ್ದಾರೆ. ಮತ್ತೊಂದು ಮುಖ್ಯ ಪಾತ್ರವನ್ನು ಅಹನ ಮಾಡಿದ್ದಾರೆ. 1995ರಲ್ಲಿ ನಡೆವ ಕಥೆಯಾಗಿದ್ದರಿಂದ ಅಂಥಾ ಲೊಕೇಶನ್ ಎಲ್ಲೂ ಸಿಗಲಿಲ್ಲ. ಅದೇ ಕಾರಣಕ್ಕೆ ಸೆಟ್‍ ಹಾಕಿಸಿ ಚಿತ್ರೀಕರಣ ಮಾಡಿದ್ದೇವೆ. ಈಗಾಗಲೇ 45 ದಿನಗಳ ಶೂಟಿಂಗ್ ನಡೆದಿದೆ’ ಎಂದರು.

ಸೆಲ್ವಿನ್‍ ಚಿತ್ರದಲ್ಲಿ ನಟಿಸಬೇಕು ಎಂಬ ಉದ್ದೇಶದಿಂದ ಬೆಂಗಳೂರಿಗೆ ಬಂದರಂತೆ. ‘ಆರಂಭದಲ್ಲಿ ಟ್ರ್ಯಾಕ್ಟರ್ ಓಡಿಸುತ್ತಿದ್ದೆ. ಆಗ ನಿರ್ದೇಶಕರು ಈ ಸಿನಿಮಾಗೆ ಕರೆದರು. ನಂತರ ಸಿನಿಮಾ ಬಗ್ಗೆ ಹಲವು ವಿಷಯಗಳನ್ನು ಕಲಿಯುತ್ತಾ ಹೋದೆ’ ಎಂದು ವಿವರಿಸಿದರು.

ನಾಯಕಿ ಬಿಂಬಿಕಾ ಮಾತನಾಡಿ, ‘ಚಿತ್ರದಲ್ಲಿ ನಾನು ಮಾತಂಗಿ ಎಂಬ ಸಿದ್ದಿ ಜನಾಂಗದ ಹುಡುಗಿಯಾಗಿ ನಟಿಸಿದ್ದೇನೆ. ‘ನಾರಾಯಣ ನಾರಾಯಣ’ ನಂತರ ಇದು ನನ್ನ 5ನೇ ಚಿತ್ರ’ ಎಂದರು.

ಈ ಚಿತ್ರಕ್ಕೆ ರಾಜು ಎನ್.ಎಂ ಅವರ ಛಾಯಾಗ್ರಹಣ, ಹರಿ ಅಜಯ್ ಅವರ ಸಂಗೀತವಿದೆ.

Tags:
error: Content is protected !!