Mysore
15
scattered clouds

Social Media

ಶನಿವಾರ, 24 ಜನವರಿ 2026
Light
Dark

ಸಂಗೀತಾ ಭಟ್‍ ಎಂಬ ‘ಪುಣ್ಯಾತ್ಗಿತ್ತಿ…’: ‘ಖೇಲಾ’ ಚಿತ್ರದ ಹಾಡು ಬಿಡುಗಡೆ

khela film song

ಹಲವು ವರ್ಷಗಳ ಹಿಂದೆ ‘ಡಾ.ಬಿ.ಆರ್.ಅಂಬೇಡ್ಕರ್’ ಚಿತ್ರ ನಿರ್ಮಿಸುವುದರ ಜೊತೆಗೆ ಅಂಬೇಡ್ಕರ್ ಅವರ ಪಾತ್ರ ನಿರ್ವಹಿಸಿದ್ದ ವಿಷ್ಣುಕಾಂತ್‍ ಅವರ ಮಗ ಭರತ್, ಇದೀಗ ಸದ್ದಿಲ್ಲದೆ ಒಂದು ಚಿತ್ರವನ್ನು ಬಹುತೇಕ ನಿರ್ಮಿಸಿ-ನಿರ್ದೇಶಿಸಿದ್ದಾರೆ. ಹೆಸರು ‘ಖೇಲಾ’. ಕೆಲವು ದಿನಗಳ ಹಿಂದೆ ಈ ಚಿತ್ರದ ತಾಯಿ ಸೆಂಟಿಮೆಂಟ್‍ ಹಾಡು ಬಿಡುಗಡೆಯಾಗಿತ್ತು. ಈಗ ಚಿತ್ರದ ‘ಪುಣ್ಯಾತ್ಗಿತ್ತಿ…’ ಎಂಬ ಹಾಡು ಬಿಡುಗಡೆ ಆಗಿದೆ.

‘ಪುಣ್ಯಾತ್ಗಿತ್ತಿ …’ ಹಾಡನ್ನು ಪ್ರಮೋದ್‍ ಜೋಯಿಸ್‍ ಬರೆದಿದ್ದು, ವೇಲ್‍ ಮುರುಗನ್‍ ಹಾಡಿದ್ದಾರೆ. ಎಂ.ಎಸ್.ತ್ಯಾಗರಾಜ್ ಸಂಗೀತ ಸಂಯೋಜಿಸಿದ್ದಾರೆ. ‘ಶ್ರಾವಣಿ ಸುಬ್ರಹ್ಮಣ್ಯ’ ಹಾಗೂ ‘ಮೈನಾ’ ಧಾರಾವಾಹಿಗಳ ವಿಹಾನ್ ಪ್ರಭಂಜನ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಅವರ ಜೊತೆಗೆ ಸಂಗೀತ ಭಟ್‍ ಸಹ ಈ ಹಾಡಿನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಭರತ್‍, ‘ಅಪ್ಪನ ಮಾರ್ಗದರ್ಶನದಲ್ಲಿ ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದೇನೆ. ‘ಖೇಲಾ’ ಎಂಬುದು ಹಿಂದಿ ಪದ ಅಲ್ಲ, ಇದು ಸಂಸ್ಕೃತದ ಪದ. ಹಾಗೆಂದರೆ ಆಟಗಾರ ಎಂದರ್ಥ. ಇಲ್ಲಿ ಆಟಗಾರ ಯಾರು? ಯಾವ ತರಹ ಆಡುತ್ತಾನೆ? ಎಂಬುದು ಚಿತ್ರದ ಕಥೆ. ಇದರಲ್ಲಿ ಪ್ರೇಮಕಥೆ, ತಾಯಿ – ಮಗನ ಬಾಂಧವ್ಯ, ಸ್ನೇಹ ಎಲ್ಲವೂ ಇದೆ. ಈ ಹಾಡನ್ನು ಕೇವಲ ಅರ್ಧ ಗಂಟೆಯಲ್ಲಿ ಬರೆದು ಮುಗಿಸಲಾಯಿತು. ಸಂಗೀತಾ ಭಟ್‍ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ತಿಂಗಳು ಅವರ ಪಾತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಒಂದು ಹಾಡು ಹಾಗು ಒಂದು ಫೈಟ್ ಹೊರತುಪಡಿಸಿದರೆ, ಮಿಕ್ಕಂತೆ ಚಿತ್ರೀಕರಣ ಮುಗಿದಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಚಿತ್ರ ಬಿಡುಗಡೆ ಆಗಲಿದೆ’ ಎಂದರು.

ನಾಯಕ ವಿಹಾನ್‍ ಪ್ರಭಂಜನ್‍ ಮಾತನಾಡಿ, ‘ತಾಯಂದಿರ ದಿನದಂದು ಬಿಡುಗಡೆಯಾದ ತಾಯಿ – ಮಗನ ಬಾಂಧವ್ಯದ ಹಾಡು ಈಗಾಗಲೇ ಜನಪ್ರಿಯವಾಗಿದೆ. ಇಂದು ಬಿಡುಗಡೆಯಾಗಿರುವ ‘ಪುಣ್ಯಾತ್ಗಿತ್ತಿ …’ ಹಾಡು ಕೂಡ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ.‌ ಈ ‌ಚಿತ್ರದಲ್ಲಿ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದೇನೆ’ ಎಂದರು.

‘ಖೇಲಾ’ ಚಿತ್ರದಲ್ಲಿ ಪ್ರಭಂಜನ್‍ಗೆ ನಾಯಕಿಯಾಗಿ ಆಶಿಕಾ ರಾವ್‍ ನಟಿಸಿದ್ದು, ಮಿಕ್ಕಂತೆ ಯುವರಾಜ್ ಗೌಡ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ತ್ಯಾಗರಾಜ್‍ ಸಂಗೀತ ಮತ್ತು ಸ್ವಾಮಿ ಮೈಸೂರು ಅವರ ಛಾಯಾಗ್ರಹಣವಿದೆ.

Tags:
error: Content is protected !!