Mysore
22
light rain

Social Media

ಶನಿವಾರ, 10 ಅಕ್ಟೋಬರ್ 2026
Light
Dark

ಟಿ.ನರಸೀಪುರ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಯತೀಂದ್ರ ಸಿದ್ದರಾಮಯ್ಯ ಗುದ್ದಲಿ ಪೂಜೆ

Yathindra Siddaramaiah

ಟಿ.ನರಸೀಪುರ: ವರುಣಾ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಗುದ್ದಲಿಪೂಜೆ ನೆರವೇರಿಸಿದರು.

ಯಡದೊರೆ, ಕುರಿಸಿದ್ದನಹುಂಡಿ ಗ್ರಾಮಕ್ಕೆ ಭೇಟಿ ನೀಡಿದ ಯತೀಂದ್ರ ಸಿದ್ದರಾಮಯ್ಯ ಅವರು, ಹಲವು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಈ ಗ್ರಾಮಕ್ಕೆ ಬರಲು ನನಗೆ ಸಂತೋಷ ಆಗುತ್ತಿದೆ. ನನಗೂ ನಮ್ಮ ತಂದೆಯವರಿಗೂ ಸಾಕಷ್ಟು ಪ್ರೀತಿ ನೀಡಿದ್ದೀರಾ. ಇದಲ್ಲದೇ ಚುನಾವಣೆಯಲ್ಲಿ ನಮ್ಮ ತಂದೆ ಹಾಗೂ ನನಗೆ ಬೆಂಬಲ ನೀಡಿದ್ದೀರಾ. ಅತಿ ಹೆಚ್ಚಿನ ಮತ ನೀಡಿ ನಮ್ಮ ಗೆಲುವಿಗೆ ಸಹಕಾರ ಕೊಟ್ಟಿದ್ದೀರಾ ಎಂದು ಸಂತಸ ವ್ಯಕ್ತಪಡಿಸಿದರು.

Tags:
error: Content is protected !!