Mysore
29
scattered clouds

Social Media

ಶನಿವಾರ, 24 ಜನವರಿ 2026
Light
Dark

ಓದುಗರ ಪತ್ರ | ಕನ್ನಡಕ್ಕೆ ಬೂಕರ್‌ ತಂದ ಬಾನು ಮುಷ್ತಾಕ್‌

ಕನ್ನಡ ಭಾಷೆಗೆ ಇದೇ ಮೊದಲ ಬಾರಿಗೆ ಬೂಕರ್ ಪ್ರಶಸ್ತಿ ಸಂದಿದೆ. 2025 ನೇ ಸಾಲಿನ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ನಮ್ಮ ಕನ್ನಡದ ಲೇಖಕಿ ಹಾಸನದ ಬಾನು ಮುಸ್ತಾಕ್ ಭಾಜನರಾಗಿದ್ದು, ಕನ್ನಡ ಭಾಷೆಗೆ ಮತ್ತು ಕರ್ನಾಟಕ ಗೌರವ ತಂದುಕೊಟ್ಟಿದ್ದಾರೆ, ಬಾನು ಮುಷ್ತಕ್ ಅವರ ಸಣ್ಣ ಕತೆಗಳ ಅನುವಾದ ಸಂಕಲನ ‘ಹಾರ್ಟ್ ಲ್ಯಾಪ್’ಗೆ ಪ್ರಶಸ್ತಿ ಸ೦ದಿದೆ.

ಬಾನು ಮುಷ್ತಾಕ್ ಅವರು ತಮ್ಮ ಬದುಕಿನಲ್ಲಿ, ಅನುಭವಿಸಿರುವ ನೋವುಗಳನ್ನು ಅನಾವರಣಗೊಳಿಸುವ ಈ ‘ಸಣ್ಣ ಕತೆಗಳ ಸಂಕಲನ’ ಇಂದು ಅಂತಾರಾಷ್ಟ್ರೀಯ ಮಟ್ಟದ ಬೂಕ‌ ಪ್ರಶಸ್ತಿಗೆ ಭಾಜನವಾಗಿದೆ.

80 ರ ದಶಕದಲ್ಲಿ, ಪತ್ರಿಕೋದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನೇ ತಂದ ಪಿ.ಲಂಕೇಶ್ ಅವರ ‘ಲಂಕೇಶ್ ಪತ್ರಿಕೆಯಲ್ಲಿ, ದಿಟ್ಟ ವರದಿಗಾರ್ತಿಯಾಗಿ, ಹಾಗೂ ಲೇಖಕಿಯಾಗಿ ಬಾನು ಮುಷ್ತಕ್ ಪರಿಚಿತಗೊಂಡರು. 80ರ ದಶಕದಲ್ಲೇ ಅವರ ಸಣ್ಣ ಕತೆಗಳು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.‌

ಸಣ್ಣ ಕತಗಳಿಗೂ, ಅಂತಾರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ಲಭಿಸುತ್ತದೆ ಎಂಬುದನ್ನು ಬಾನು ಮುಷ್ತಾಕ್ ಸಾದರಪಡಿಸಿದ್ದಾರೆ. ಇವರಿಗೆ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳು,
– ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

Tags:
error: Content is protected !!