Mysore
27
scattered clouds

Social Media

ಗುರುವಾರ, 30 ಏಪ್ರಿಲ 2026
Light
Dark

ಆದಷ್ಟು ಬೇಗ ಮೈಸೂರು ಪಾಲಿಕೆ ಚುನಾವಣೆ ನಡೆಸಬೇಕು: ಸರ್ಕಾರಕ್ಕೆ ಸಂಸದ ಯದುವೀರ್‌ ಒಡೆಯರ್‌ ಆಗ್ರಹ

yadhuveer krishnadatta wadiyar

ಮೈಸೂರು: ಮಳೆ ಬಂದು ಏನೇ ಸಮಸ್ಯೆ ಆದರೂ ಅದನ್ನು ಹೇಳಿಕೊಳ್ಳಲು ಪಾಲಿಕೆಯಲ್ಲಿ ಪ್ರತಿನಿಧಿಗಳೇ ಇಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅಸಮಾಧಾನ ಹೊರಹಾಕಿದ್ದಾರೆ.

ಮಳೆಯಿಂದ ಮೈಸೂರು ನಗರದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಂಸದ ಯದುವೀರ್‌ ಒಡೆಯರ್‌ ಅವರು, ಮೈಸೂರು ಮಹಾನಗರ ಪಾಲಿಕೆಗೆ ಚುನಾವಣೆ ಆಗಿಲ್ಲ. 2 ವರ್ಷದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ.

ಇದನ್ನೂ ಓದಿ:- ನಾವು ಪಾಕಿಸ್ತಾನದೊಳಕ್ಕೆ ನುಗ್ಗಿ ಹೊಡೆದಿದ್ದೇವೆ: ಸಂಸದ ಯದುವೀರ್‌ ಒಡೆಯರ್‌ 

ಯಾಕೆ ಸರ್ಕಾರ ಪಾಲಿಕೆ ಚುನಾವಣೆ ನಡೆಸುತ್ತಿಲ್ಲ ಎಂಬುದೇ ತಿಳಿಯುತ್ತಿಲ್ಲ. ನಾವು ಸಾಕಷ್ಟು ಬಾರಿ ಚುನಾವಣೆ ನಡೆಸಿ ಎಂದು ಮನವಿ ಮಾಡಿದ್ದೇವೆ. ಮಳೆ ಬಂದು ಏನೇ ಸಮಸ್ಯೆ ಆದರೂ ಅದನ್ನು ಹೇಳಿಕೊಳ್ಳಲು ಪಾಲಿಕೆಯಲ್ಲಿ ಯಾರು ಕೂಡ ಪ್ರತಿನಿಧಿಗಳೇ ಇಲ್ಲ. ಜನಪ್ರತಿನಿಧಿಗಳು ಇಲ್ಲದೆ ಇರುವುದರಿಂದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಆದಷ್ಟು ಬೇಗ ತೀರ್ಮಾನ ಮಾಡಬೇಕು ಎಂದು ಆಗ್ರಹಿಸಿದರು.

 

Tags:
error: Content is protected !!