Mysore
20
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಯುದ್ಧ ಛಾಯೆ : ಭಾರತ-ಪಾಕಿಸ್ತಾನ ಸೇನಾ ಬಲಾಬಲ ಹೇಗಿದೆ ಗೊತ್ತಾ?

india pakistan military

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು 26 ಅಮಾಯಕರನ್ನು ಕೊಂದ ನಂತರ ಭಾರತ-ಪಾಕಿಸ್ತಾನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ. ಸಿಂಧೂ ಜಲ ಒಪ್ಪಂದ ರದ್ದು, ವೀಸಾ ರದ್ದು, ಅಟ್ಟಾರಿ ಗಡಿ ಬಂದ್ ಸೇರಿದಂತೆ ಹಲವು ಕ್ರಮಗಳನ್ನು ಭಾರತ ಕೈಗೊಂಡಿದೆ. ಇದರಿಂದ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯುದ್ಧದ ಸನ್ನಿವೇಶ ಉದ್ಭವಿಸಿದೆ. ‌

ಮತ್ತೊಂದೆಡೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಬುಧವಾರ(ಏ.30) ರಾಜಕೀಯ ವ್ಯವಹಾರಗ ಸಂಪುಟ ಸಮಿತಿ ಸಭೆ ನಡೆಯುತ್ತಿದ್ದು, ಎಲ್ಲರಲ್ಲೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಈಗಾಗಲೇ ಎರಡು ದೇಶಗಳ ನಡುವೆ ನಾಲ್ಕು ಯುದ್ಧಗಳು ನಡೆದಿವೆ, ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಐದನೇ ಯುದ್ಧ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಯುದ್ಧದ ಪ್ರಸ್ತಾಪ ಬಂದಾಗ, ಯಾವ ದೇಶ ಬಲಿಷ್ಠ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಈ ಬಲಾಬಲ ಸಂಖ್ಯೆಯ ಸಮಗ್ರ ಮಾಹಿತಿ ಇಲ್ಲಿದೆ.

ಭಾರತ-ಪಾಕಿಸ್ತಾನ ಬಲಾಬಲ

ಭಾರತ ಸೈನಿಕರು ; 14,55,550
(ವಿಶ್ವದ 2ನೇ ಅತಿ
ದೊಡ್ಡ ಸೈನ್ಯ).

ಮೀಸಲು ಸಿಬ್ಬಂದಿ ;
9,60,000

ಪ್ಯಾರಾಮಿಲಿಟರಿ ;
25,27,000

ಟ್ಯಾಂಕ್‌ಗಳು ;
4,201

ಒಟ್ಟು ವಿಮಾನಗಳು;
2,229 (ವಿಶ್ವದಲ್ಲಿ 4ನೇ ಸ್ಥಾನ).

ಫೈಟರ್ ಜೆಟ್ಗಳು;
513

ಫೈಟರ್ ಜೆಟ್ಗಳು: ರಫೇಲ್, ಸುಖೋಯ್ 30, ತೇಜಸ್

ಹೆಲಿಕಾಪ್ಟರ್‌ಗಳು ;
899

ಅಟ್ಯಾಕ್‌ ಹೆಲಿಕಾಪ್ಟರ್‌ಗಳು ;
80

ವಿಮಾನವಾಹಕ ನೌಕೆಗಳು ; 2

ಫಿರಂಗಿಗಳು ;
9,719

ಆರ್ಮರ್ಡ್‌ ವೆಹಿಕಲ್‌ಗಳು ;
1,48,594

ಸಬ್‌ಮರೀನ್ ;
18

ಡಿಸ್ಟ್ರಾಯರ್‌ ನೌಕೆಗಳು ;
13

ಪರಮಾಣು ಶಕ್ತಿ
130-150 (ಸಿಡಿತಲೆಗಳು)

ಪಾಕಿಸ್ತಾನ
ಸೈನಿಕರು ;
6,54,000

ರಿಸರ್ವ್‌ ಸಿಬ್ಬಂದಿ ;
6,50,000

ಪ್ಯಾರಮಿಲಿಟರಿ ;
5,00,000

ಟ್ಯಾಂಕ್‌ಗಳು ;
2,627

ಫಿರಂಗಿಗಳು ;
4,472

ಆರ್ಮಡ್ ವೆಹಿಕಲ್‌ಗಳು ;
17,516

ಒಟ್ಟು ವಿಮಾನಗಳು ;
1,399

ಫೈಟರ್ ಜೆಟ್‌ಗಳು ;
328

ಫೈಟರ್ ಜೆಟ್‌ಗಳು ;
ಎಫ್-16, ಜೆಎಫ್-17

ಹೆಲಿಕಾಪ್ಟರ್‌ಗಳು; 373

ಅಟ್ಯಾಕ್ ಹೆಲಿಕಾಪ್ಟರ್ಗಳು ;
57

ವಿಮಾನವಾಹಕ ನೌಕೆಗಳು‌ ;
0

ಸಬ್‌ ಮರೀನ್‌ಗಳು ;
8

ಡಿಸ್ಟಾಯರ್ ನೌಕೆಗಳು 0

ಪರಮಾಣು ಶಕ್ತಿ ;
140-150(ಸಿಡಿತಲೆಗಳು)

Tags:
error: Content is protected !!