Mysore
22
overcast clouds

Social Media

ಗುರುವಾರ, 01 ಜನವರಿ 2026
Light
Dark

 ಏಪ್ರಿಲ್.‌24ರಂದು ಮಹದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್‌ ಮೀಟಿಂಗ್: 2 ಸಾವಿರ ಪೊಲೀಸರ ನಿಯೋಜನೆ

cabinet meeting male mahadeshwara hill

ಚಾಮರಾಜನಗರ: ಇದೇ ಏಪ್ರಿಲ್.‌24ರಂದು ಪವಾಡ ಪುರುಷ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್‌ ಮೀಟಿಂಗ್‌ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಏಪ್ರಿಲ್.‌24ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಬೆಟ್ಟದ ವಜ್ರಮಲೆ ಭವನದ ಮುಂಭಾಗವಿರುವ ಖಾಲಿ ಜಾಗದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ:- ಮೈಸೂರು| ಮರ ಕಡಿದ ಜಾಗದಲ್ಲಿ ಮಕ್ಕಳಿಂದ ಅಭಿಯಾನ

ಈ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಸಾರ್ವಜನಿಕರು ವಸತಿ ಗೃಹದಲ್ಲಿ ತಂಗಲು ನಿರ್ಬಂಧ ವಿಧಿಸಲಾಗಿದೆ.

ಕ್ಯಾಬಿನೆಟ್‌ ಮೀಟಿಂಗ್‌ ದಿನವೇ ಸುಮಾರು 69 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಜ್ರಮಲೆ ಭವನ ಅಂದೇ ಉದ್ಘಾಟನೆ ಆಗಲಿದೆ.

ಇದನ್ನೂ ಓದಿ:- ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಗೊತ್ತಾ.?

ಸಂಪುಟ ಸಭೆಯ ಬಂದೋಬಸ್ತ್‌ಗಾಗಿ ಇಬ್ಬರು ಡಿಜಿಪಿ, ಇಬ್ಬರು ಎಸ್ಪಿ, 11 ಮಂದಿ ಡಿವೈಎಸ್ಪಿ, 31 ಮಂದಿ ಇನ್ಸ್‌ಪೆಕ್ಟರ್‌ ಸೇರಿದಂತೆ ಸುಮಾರು 2000ಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

Tags:
error: Content is protected !!