Mysore
27
haze

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕಗಳು

ಗುಂಡ್ಲುಪೇಟೆ : ಸಾರ್ವಜನಿಕ ಸ್ಥಳಗಳಲ್ಲಿ ಜನರ ಪರದಾಟ

ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ: ಒಂದೆಡೆ ಬೇಸಿಗೆಯ ಬಿಸಿಲಿನಿಂದ ಜನರು ಬೆಂಡಾಗಿದ್ದಾರೆ. ಮತ್ತೊಂದು ಕಡೆ ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣ ಹಳೇ ಬಸ್ ನಿಲ್ದಾಣ ದಲ್ಲಿರುವ ನೀರಿನ ಘಟಕಗಳು ಕೆಟ್ಟು ನಿಂತು ಜನರು ನೀರಿಗಾಗಿ ಪರ ದಾಡುವಂತಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟಿರುವ ಹಿನ್ನೆಲೆಯಲ್ಲಿ ಜನರು ಅಂಗಡಿಗಳಲ್ಲಿ ಹಣ ಕೊಟ್ಟು ನೀರಿನ ಬಾಟಲಿ ಖರೀದಿಸಬೇಕಾಗಿದೆ. ಆದ್ದರಿಂದ ಶೀಘ್ರದಲ್ಲಿ ಶುದ್ಧ ಕುಡಿ ಯುವ ನೀರಿನ ಘಟಕಗಳನ್ನು ದುರಸ್ತಿ ಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಟ್ಟಣಕ್ಕೆ ಪ್ರತಿನಿತ್ಯ ಗ್ರಾಮೀಣ ಭಾಗದಿಂದ ನೂರಾರು ಮಂದಿ ಆಗಮಿಸುತ್ತಾರೆ. ಆದರೆ, ಸಾರ್ವ ಜನಿಕ ಬಸ್ ನಿಲ್ದಾಣದಲ್ಲಿ, ಹಳೇ ಬಸ್ ನಿಲ್ದಾಣದಲ್ಲಿರುವ ನೀರಿನ ಘಟಕ ಗಳು ಕೆಟ್ಟುನಿಂತಿವೆ. ತಾಲ್ಲೂಕು ಕಚೇರಿ ಯಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬೇಸಿಗೆಯಲ್ಲಿ ಎಲ್ಲೂ ಶುದ್ಧ ಕುಡಿಯುವ ನೀರು ಸಿಗದೆ ಬಾಯಾರಿಕೆ ತಣಿಸಿಕೊಳ್ಳಲು ಜನರು ಅಂಗಡಿಗಳತ್ತ ಮುಖ ಮಾಡ ಬೇಕಾಗಿದೆ.

ಕೂಡಲೆ ಪುರಸಭೆ ಹಾಗೂ ತಾಲ್ಲೂಕು ಆಡಳಿತ ಸಾರ್ವಜನಿಕ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಬೇಕು. ಜೊತೆಗೆ ಕೆಟ್ಟು ನಿಂತಿರುವ ನೀರಿನ ಘಟಕಗಳನ್ನು ದುರಸ್ತಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬಿರು ಬಿಸಿಲಿಗೆ ಜನ ಹೈರಾಣಾ ಗುತ್ತಿದ್ದಾರೆ. ಆದರೆ ಪಟ್ಟಣದಲ್ಲಿ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದು, ಜನರು ಅಂಗಡಿ ಗಳಿಗೆ ತೆರಳಿ ನೀರಿನ ಬಾಟಲಿ ಖರೀದಿಸುತ್ತಿದ್ದಾರೆ. ತಾಲ್ಲೂಕು ಆಡಳಿತ ಮತ್ತು ಪುರಸಭೆ ಇತ್ತ ಗಮನಹರಿಸಿ ಕ್ರಮ ಜರುಗಿಸಬೇಕು. -ಮುನೀರ್ ಪಾಷ, ಗಡಿನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ

 

Tags:
error: Content is protected !!