Mysore
13
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಚಿಣ್ಣರ ಮೇಳ ; ನಕ್ಕು ನಲಿಯುತ್ತಿರುವ ಪುಟಾಣಿಗಳು

ಮೈಸೂರು : ಸ್ಕೂಲ್‌ಗಿಂತ ಇಲ್ಲೇ ಇರೋಕೆ ಇಷ್ಟ. ಮನೆಗೆ ಹೋಗೋಕು ಮನಸ್ಸು ಬರುತ್ತಿಲ್ಲ. ಇಲ್ಲೇ ಇದ್ದು ಬಿಡೋಣ ಅನ್ನಿಸಿತ್ತಿದೆ…..

ಇವು ನಗರದ ರಂಗಾಯಣದ ಆವರಣದಲ್ಲಿ ನಡೆಯುತ್ತಿರುವ ಚಿಣ್ಣರ ಮೇಳದಲ್ಲಿ ಭಾಗವಹಿಸಿರುವ ಪುಟಾಣಿಗಳು ಆಡಿದ ಮಾತುಗಳು.

ಬೇಸಿಗೆ ರಜೆ ಹಿನ್ನಲೆ ರಂಗಾಯಣ ಆವರಣದಲ್ಲಿ ಪ್ರಸಕ್ತ ಸಾಲಿನ ಚಿಣ್ಣರ ಮೇಳೆ ನಡೆಯುತ್ತಿದೆ. ಏ.14 ರಂದು ಪ್ರಾರಂಭವಾಗಿರುವ ಮೇಳವು ಮೇ 10 ರವರಗೆ ನಡೆಯಲಿದೆ. ಇಲ್ಲಿ 250-ರಿಂದ 300 ಮಕ್ಕಳು ಭಾಗಿಯಾಗಿದ್ದು, ಮರೆಯಾಗುತ್ತಿರುವ ದೇಶೀಯ ಆಟೋಟಗಳಲ್ಲಿ ಭಾಗವಹಿಸಿ ನಲಿಯುತ್ತಿದ್ದಾರೆ.

6 ರಿಂದ 15 ವರ್ಷದ ವಯೋಮಿತಿಯ ಮಕ್ಕಳು ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ತನಕ ದೇಶೀಯ ಲಲಿತಾ ಕಲೆಗಳ ಕಲಿಕೆಯಲ್ಲಿ ಪಾಲ್ಗೊಂಡು ಎಂಜಾಯ್ ಮಾಡುತ್ತಿದ್ದಾರೆ. ಹಸು ಹುಲಿ ಆಟ, ಲಗೋರಿ, ನಾಟಕ, ಹಾಡು, ನೃತ್ಯ ಗಳಲ್ಲಿ ಭಾಗಿಯಾಗಿ ನಕ್ಕಿ ನಲಿಯುತ್ತಿದ್ದಾರೆ.

ಮನೆಗೆ ಹೋಗೋದಕ್ಕೆ ಮನಸ್ಸು ಬರುತ್ತಿಲ್ಲ. ಇಲ್ಲೇ ಇರಬೇಕು ಎನಿಸುತ್ತದೆ.. ಶಾಲೆಗೆ ಹೋಗೋಕೆ ಬೇಜಾರು. ಇಲ್ಲೇ ಇದ್ದು ಬಿಡೋಣ ಅನಿಸುತ್ತೆ. ಸ್ಕೂಲ್ ಗಿಂತ ಇಲ್ಲೇ ಇರೋಕೆ ಇಷ್ಟ ಎಂದು ಮಕ್ಕಳು ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಮೇಳದಲ್ಲಿ ಹಾಡು, ನಾಟಕ, ಕ್ರೀಡಾ ಕ್ಷೇತ್ರದಲ್ಲಿ ನುರಿತ ತಜ್ಞರಿಂದ ಮಕ್ಕಳಿಗೆ ತರಬೇತಿ ನಡೆಯುತ್ತಿದೆ. ಮೈಸೂರು ನಗರ, ಗ್ರಾಮೀಣ ಭಾಗದಿಂದಲೂ ಮಕ್ಕಳು ಹೆಚ್ಚಿನ ಸಂಖ್ಯೆಯ ಮಕ್ಕಳು ಭಾಗಿಯಾಗಿದ್ದಾರೆ.

Tags:
error: Content is protected !!