Mysore
20
clear sky

Social Media

ಶುಕ್ರವಾರ, 02 ಜನವರಿ 2026
Light
Dark

ಓದುಗರ ಪತ್ರ: ಬಾಲಕಿ ಕೊಲೆ; ಬೀಭತ್ಸ ದುಷ್ಕೃತ್ಯ

ಓದುಗರ ಪತ್ರ

ಹುಬ್ಬಳ್ಳಿಯ ಅಧ್ಯಾಪಕ್ ನಗರದಲ್ಲಿ  ಬಿಹಾರ  ಮೂಲದ ವ್ಯಕ್ತಿಯೊಬ್ಬ  ಐದು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿರುವ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಮಾನವ  ಪ್ರೀತಿ,  ಮಮತೆ, ವಾತ್ಸಲ್ಯ, ಸ್ನೇಹ ಹಾಗೂ ಸಂಬಂಧಕ್ಕಿಂತ ಕ್ಷಣಿಕ  ಸುಖಕ್ಕೆ  ಪ್ರಾಶಸ್ತ್ಯ ಕೊಟ್ಟು ಮೌಲ್ಯಗಳನ್ನು,  ಸಂಬಂಧಗಳನ್ನು ಗಾಳಿಗೆ ತೂರಿ ಈ ರೀತಿಯ ಪಾಪದ ಕೃತ್ಯಗಳಲ್ಲಿ  ತೊಡಗಿಸಿಕೊಳ್ಳುವುದು  ತರವಲ್ಲ.  ಹೆಣ್ಣುಮಕ್ಕಳ  ಮೇಲಿನ  ಪೈಶಾಚಿಕ  ಕೃತ್ಯಗಳು  ನಿಲ್ಲಬೇಕಿದೆ. ಜೊತೆಗೆ ಪೊಲೀಸರು ಹಾಗೂ ಸರ್ಕಾರ ತಪ್ಪು ಮಾಡಿದ ವ್ಯಕ್ತಿ ಯಾರೇ ಆಗಿರಲಿ ಹೆಡೆಮುರಿ ಕಟ್ಟಿ ತಕ್ಕ ಶಾಸ್ತಿಯನ್ನು ಮಾಡಲೇಬೇಕಿದೆ.  ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ಪೊಲೀಸರ ಕಾರ್ಯ ಸಾಧನೆ  ನಿಜಕ್ಕೂ ಮೆಚ್ಚುವಂಥದ್ದು .

-ಹರಳಹಳ್ಳಿ  ಪುಟ್ಟರಾಜು, ಪಾಂಡವಪುರ.

 

Tags:
error: Content is protected !!