Mysore
27
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಓದುಗರ ಪತ್ರ: ತ.ನಾಡು ಇತರ ರಾಜ್ಯಗಳಿಗೆ ಮಾದರಿ

dgp murder case

ಪ್ರಜಾಪ್ರಭುತ್ವ ಸರ್ಕಾರ ಎಂದರೆ ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ತಮ್ಮ ಜನರನ್ನು ಪರೋಕ್ಷವಾಗಿ ಪ್ರತಿನಿಧಿಸುವ ಒಂದು ಭಾಗ. ಅದರಂತೆ ಸಂಸತ್ತಿನಲ್ಲೇ ಆಗಲಿ, ವಿಧಾನಸಭೆಯಲ್ಲೇ ಆಗಲಿ, ಸಾಂವಿಧಾನಿಕ ಬಿಕ್ಕಟ್ಟು ಉಂಟಾಗದಂತೆ ಜನಪ್ರತಿನಿಧಿಗಳು ಜಾಗ್ರತೆ ವಹಿಸಬೇಕು. ತಮಿಳುನಾಡಿನ ರಾಜ್ಯಪಾಲರು ೧ ವರ್ಷದಿಂದ ಹಲವು ಮಸೂದೆಗಳನ್ನು ಸರ್ಕಾರಕ್ಕೆ ವಾಪಸ್ ಕಳುಹಿಸದೆ ಅಥವಾ ಅಂಕಿತ ಹಾಕದೆ ತಮ್ಮ ಬಳಿಯೇ ಉಳಿಸಿಕೊಂಡಿದ್ದರು. ಆದರೆ, ಈಗ ಸುಪ್ರೀಂಕೋರ್ಟ್  ನೀಡಿರುವ ತೀರ್ಪನ್ನು ತಮಿಳುನಾಡು ಜನತೆಯ ಗೆಲುವು ಎನ್ನಬಹುದು.

ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಸರ್ವೋಚ್ಚರು ಮತ್ತು ಅವರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳ ಸರ್ಕಾರ, ದೇಶ ಅಥವಾ ರಾಜ್ಯದ ಕಾವಲುಗಾರರಾಗಿರುತ್ತಾರೆ. ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಲ್ಲಿನ ಜನರ ಮನಸ್ಥಿತಿಯಿಂದ ಅಲ್ಲಿನ ಜನರ ಪ್ರಾದೇಶಿಕ ಮತ್ತು ದೇಶದ ಒಳಿತು ಕೆಡುಕುಗಳಿರುತ್ತವೆ. ಇದಕ್ಕೆ ತಮಿಳುನಾಡು ಸಾಕ್ಷಿಯಾಗಿ ನಮ್ಮ ಕಣ್ಣಿನ ಮುಂದೆ ಇದೆ.

– ಅಭಿಷೇಕ್, ಶಂಕರಪುರ, ನಂಜನಗೂಡು

Tags:
error: Content is protected !!