Mysore
21
overcast clouds

Social Media

ಸೋಮವಾರ, 17 ಆಗಸ್ಟ್ 2026
Light
Dark

2028ರ ಒಲಂಪಿಕ್ಸ್‌ನಲ್ಲಿ ಕ್ರಿಕೆಟ್‌: 6 ತಂಡಗಳಿಗೆ ಅವಕಾಶ

ನವದೆಹಲಿ: 128 ವರ್ಷಗಳ ನಂತರ 2028ರ ಲಾಸ್‌ ಏಂಜಲೀಸ್‌ ಕ್ರೀಡಾಕೂಟದ ಮೂಲಕ ಒಲಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಟಿ20 ಸ್ವರೂಪದಲ್ಲಿ ನಡೆಸಲು ಬುಧವಾರ ತೀರ್ಮಾನಿಸಲಾಗಿದೆ.

1900ರ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಕೊನೆಯ ಬಾರಿಗೆ ಒಲಂಪಿಕ್ಸ್‌ನಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿ ಗ್ರೇಟ್‌ ಬ್ರಿಟನ್‌ ಮತ್ತು ಫ್ರಾನ್ಸ್‌ ನಡುವೆ ಎರಡು ದಿನಗಳ ಪಂದ್ಯವನ್ನು ನಡೆಸಲಾಗಿತ್ತು.

ಒಲಂಪಿಕ್ಸ್‌ನ ಈ ಕ್ರಿಕೆಟ್‌ ಟೂರ್ನಿಯಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ತಲಾ 6 ತಂಡಗಳು ಸ್ಪರ್ಧಿಸುತ್ತವೆ.

ಅಂತರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು (ಐಸಿಸಿ) ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್‌, ಭಾರತ, ಐರ್ಲೆಂಡ್‌, ನ್ಯೂಜಿಲೆಂಡ್‌, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌ ಮತ್ತು ಜಿಂಬಾಂಬ್ವೆ ಸೇರಿದಂತೆ 12 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.

ಈ ಒಲಂಪಿಕ್ಸ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಪಂದ್ಯಾವಳಿಗೆ ಅರ್ಹತಾ ಮಾನದಂಡಗಳನ್ನು ಇನ್ನೂ ದೃಢಿಕರಿಸಿಲ್ಲ. ಆದರೆ, ಅತಿಥೇಯ ಅಮೇರಿಕಾ ರಾಷ್ಟ್ರವು ನೇರವಾಗಿ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಅಂದರೆ, ಕೇವಲ ಐದು ತಂಡಗಳಿಗೆ ಅರ್ಹತಾ ಪ್ರಕ್ರಿಯೆ ಮೂಲಕ ಪ್ರವೇಶ ಪಡೆಯಲು ಅವಕಾಶವಿರುತ್ತದೆ.

 

Tags:
error: Content is protected !!