ಮಂಡ್ಯ : ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವ ಸಾರುವ ಮೇಲುಕೋಟೆ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ.
ಇನ್ನೂ ಉತ್ಸವ ಸಿದ್ದತೆ ಬಗ್ಗೆ ವಿವರಣೆ ನೀಡಿದ ಜಿಲ್ಲಾಧಿಕಾರಿ ಕುಮಾರ, ಶ್ರೀದೇವಿ ಮತ್ತು ಭೂದೇವಿ ದೇವತೆಗಳು ಅಲಂಕೃತವಾಗಿ ವೈರಮುಡಿ ಅಕ್ಕಪಕ್ಕ ಇರಲಿವೆ. ವಜ್ರಖಚಿತ ರಾಜಮುಡಿ ಮತ್ತು ವೈರಮುಡಿ ಆಭರಣಗಳನ್ನು ಜಿಲ್ಲಾ ಖಜಾನೆಯಿಂದ ಇಂದು ಬೆಳಿಗ್ಗೆ 7 ಗಂಟೆಗೆ ಸಂಪ್ರದಾಯದಂತೆ ಪೂಜೆ ಬಳಿಕ ಹೊರ ತಂದು ಸ್ಥಳೀಯರ ಸಮ್ಮುಖದಲ್ಲಿ ಬೆಳಿಗ್ಗೆ ಮೆರವಣಿಗೆಯಲ್ಲಿ ಮೇಲುಕೋಟೆಗೆ ತಲುಪಿಸಲಾಗಿದೆ. ಸಾಯಂಕಾಲ 8;30 ರ ಸುಮಾರಿಗೆ ಚಲುವನಾರಾಯಾಣಸ್ವಾಮಿ ದೇವಾಲಯ ತಲುಪಲಿವೆ. ಅದಾದ ಬಳಿಕ ಬ್ರಹ್ಮೋತ್ಸವ ಶುರುವಾಗಲಿದೆ ಎಂದು ಹೇಳಿದರು.





