Mysore
18
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಕೆಪಿಸಿಸಿ ಅಧ್ಯಕ್ಷರು ಯಾರೇ ಆದರೂ ನಮ್ಮ ಬೆಂಬಲವಿರುತ್ತದೆ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಸ್ಥಾನದಲ್ಲಿ ಸಚಿವ ಈಶ್ವರ್‌ ಖಂಡ್ರೆ ಆಗಲಿ ಅಥವಾ ಬೇರೆಯಾರೇ ಆದರೂ ನಮ್ಮ ಬೆಂಬಲವಿರುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಏಪ್ರಿಲ್‌.4) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಮತ್ತು ಸಚಿವ ಈಶ್ವರ್‌ ಖಂಡ್ರೆ ಅವರ ಹೆಸರಿದೆ. ಸಿಎಂ ಸಿದ್ದರಾಮಯ್ಯ ಅವು ದೆಹಲಿ ಭೇಟಿಯಲ್ಲಿ ಹೈಕಮಾಂಡ್‌ನೊಂದಿಗಡ ಚರ್ಚಿಸಿದ್ದು ಸಂಜೆ ಮಾಹಿತಿ ತಿಳಿಯುತ್ತದೆ. ಸಿಎಂ ಸಿದ್ದರಾಮಯ್ಯ ಏನೇನು ಚರ್ಚಿಸಿದರೂ ಎಂದು ಅವರು ದೆಹಲಿಯಿಂದ ವಾಪಾಸ್‌ ಬಂದ ಮೇಲೆ ತಿಳಿಯುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹನಿಟ್ರ್ಯಾಪ್‌ ವಿಚಾರವಾಗಿ ಮಾತನಾಡಿದ ಅವರು, ಹನಿಟ್ರ್ಯಾಪ್‌ ವಿಚಾರದಲ್ಲಿ ನಾವಯ ಎಚ್ಚರಿಕೆಯಿಂದ ಇರಬೇಕು. ಈ ಬಗ್ಗೆ ಇತಿಶ್ರೀ ಹಾಡಬೇಕು. ಹಾಯ್‌ ಅಂದರೆ ನಾವು ಹಾಯ್‌ ಅನ್ನಬಾರದು, ಬೈ ಬೈ ಎಂದು ಓಡಿಸಿ ಹೋಗಬೇಕು ಅಷ್ಟೇ. ರಾಜಣ್ಣ ಹಾಯ್‌ ಎಂದವರಿಗೆ ಬಾಯ್‌ ಎಂದಿದ್ದಾರಂತೆ ಎಂದರು.

Tags:
error: Content is protected !!