ಕುಲುಕುತ್ತಾ ಬಳುಕುತ್ತಾ
ಮನೆ ಮನೆಗೆ ಬೆಳ್ಳಂಬೆಳಿಗ್ಗೆ
ಬಿರಬಿರನೇ ಬರುತ್ತಿದ್ದ
ಶ್ವೇತ ಸುಂದರಿ ನಂದಿನಿ,
ನಿನ್ನೆಯಿಂದ ಯಾಕೋ
ತವರು ಮನೆಯಿಂದ(ಉತ್ಪಾದಕ)
ಗಂಡನ ಮನೆಗೆ (ಗ್ರಾಹಕ)
ಸಪ್ಪೆ ಮೋರೆಯೊಂದಿಗೆ
ಇಡುತಿಹೆ ಭಾರವಾದ ಹೆಜ್ಜೆ,
ಇದು ನಿನ್ನೊಬ್ಬಳ ಕಥೆಯಲ್ಲಮ್ಮ,
ವಿದ್ಯುತ್ತಕ್ಕ, ಆಟೋ ಆಂಟಿ,
ಬಸ್ಸಮ್ಮ,ಮಿಸ್ ಮೆಟ್ರೋ, ಡೀಸೆಲ್ವಿ..
ಎಲ್ಲರದೂ ಅದೇ ಹಾಡು,
ನಿನ್ನ ನಂಬಿ ಕೈ ಹಿಡಿದಿದ್ದಕ್ಕೆ
ನನಗೆ ಬಂತು ಈ ಪಾಡು !
-ಮ.ಗು.ಬಸವಣ್ಣ , ಮೈಸೂರು





