Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಎಐ ತಂತ್ರಜ್ಞಾನದಿಂದ ಘಿಬ್ಲಿ ಶೈಲಿಯ ಇಮೇಜ್ ಹವಾ

ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನವು ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸುತ್ತಿದೆ. ಇದರಲ್ಲಿ ಹೊಸದೇನೋ ಬಂದ ಬಳಿಕ ಎಲ್ಲರೂ ಅದನ್ನು ಅನುಸರಿಸುವಂತಾಗಿದೆ. ಜೊತೆಗೆ ಸಾಮಾಜಿಕ ಮಾಧ್ಯಮಗಳ ತುಂಬಾ ಅದರದ್ದೇ ಹವಾ.

ಅದರಂತೆ ಈಗ ಇಂಟರ್ ನೆಟ್‌ನಲ್ಲಿ ಘಿಬ್ಲಿ ಶೈಲಿಯ ಇಮೇಜ್ ದೂಳೆಬ್ಬಿಸುತ್ತಿದೆ. ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಸ್ಟುಡಿಯೋ ಘಿಬ್ಲಿ ಶೈಲಿಯ ಫೋಟೋಗಳು ಚರ್ಚೆಯ ವಿಷಯವಾಗಿದೆ. ಎಲ್ಲರೂ ಘಿಬ್ಲಿ ಶೈಲಿಯ ಚಿತ್ರವನ್ನು ರಚಿಸುತ್ತಿದ್ದಾರೆ. ಚಾಟ್ ಜಿಪಿಟಿ (ChatGPT )ಯ ಈ ಹೊಸ ಇಮೇಜ್ ಸೃಷ್ಟಿ ಸಾಧನವು ಲಕ್ಷಾಂತರ ಮೊಬೈಲ್ ಬಳಕೆದಾರರಿಗೆ ಹೊಸ ಅನುಭವವನ್ನು ನೀಡಿದೆ. ಚಾಟ್ ಜಿಪಿಟಿಯ ಈ ವೈಶಿಷ್ಟ್ಯದ ಮೂಲಕ, ಬಳಕೆದಾರರು ತಮ್ಮ ನೆಚ್ಚಿನ ಫೋಟೋಗಳು, ಸಿನಿಮಾ ನಟ-ನಟಿಯರ ಫೋಟೋಗಳು ಅಥವಾ ಜನಪ್ರಿಯ ಮೀಮ್‌ಗಳನ್ನು ಸ್ಟುಡಿಯೋ ಘಿಬ್ಲಿ ತರಹದ ಚಿತ್ರಗಳಾಗಿ ಪರಿವರ್ತಿಸುತ್ತಿದ್ದಾರೆ.

ನೀವು ಕೂಡ ಘಿಬ್ಲಿ ಚಿತ್ರವನ್ನು ರಚಿಸಬಹುದು, ಅದೂ ಕೂಡ ಉಚಿತವಾಗಿ. ಘಿಬ್ಲಿ ಫೋಟೋವನ್ನು ಕ್ರಿಯೆಟ್ ಮಾಡುವುದು ಹೇಗೆ? ಮತ್ತು ಸ್ಟುಡಿಯೋ ಘಿಬ್ಲಿ ಎಂದರೇನು? ಎಂಬ ಕುರಿತ ಮಾಹಿತಿ ಇಲ್ಲಿದೆ. ಚಾಟ್ ಜಿಪಿಟಿಯ ಈ ಹೊಸ ವೈಶಿಷ್ಟ್ಯವನ್ನು ಜಿಪಿಟಿ-೪ ಟರ್ಬೊದಲ್ಲಿ ಕಾರ್ಯನಿರ್ವಹಿಸುವ ಚಾಟ್ ಜಿಪಿಟಿ ಪ್ಲಸ್ ಹೊಂದಿರುವವರು ಮತ್ತು DALL-E ಮೂಲಕ ಮಾತ್ರ ಬಳಸಬಹುದು. ಆದಾಗ್ಯೂ, ಹೊಸ ಬಳಕೆದಾರರು ಈ ಎಐ ಇಮೇಜ್ ಜನರೇಟರ್ ಅನ್ನು ಬಳಸಲು ಬಯಸಿದರೆ, ಈ ಸೌಲಭ್ಯವನ್ನು ಪಡೆಯಲು ಅವರು ತಿಂಗಳಿಗೆ ಸುಮಾರು ೧,೭೧೨ ರೂ. ಪಾವತಿಸಬೇಕಾಗುತ್ತದೆ. ಚಾಟ್ ಜಿಪಿಟಿಯಲ್ಲಿ ಸ್ಟುಡಿಯೋ ಘಿಬ್ಲಿ ತರಹದ ಚಿತ್ರಗಳನ್ನು ರಚಿಸಲು, ನೀವು ‘ಇದನ್ನು ಘಿಬ್ಲಿ ಶೈಲಿಯ ಫೋಟೋವನ್ನಾಗಿ ಪರಿವರ್ತಿಸಬಹುದೇ?’, ‘ಸ್ಟುಡಿಯೋ ಘಿಬ್ಲಿ’ ಎಂದು ಟೈಪ್ ಮಾಡಬಹುದು.

ಸ್ಟುಡಿಯೋ ಘಿಬ್ಲಿ ಶೈಲಿಯ ಚಿತ್ರಗಳನ್ನು ಉಚಿತವಾಗಿ ರಚಿಸುವುದು ಹೇಗೆ?: 

ಚಾಟ್ ಜಿಪಿಟಿ ಹೊರತುಪಡಿಸಿ, ನೀವು ಇದನ್ನು ಉಚಿತವಾಗಿ ಮಾಡಲು ಕೆಲ ಆಪ್ಗಳಿವೆ. ಉಚಿತವಾಗಿ ಘಿಬ್ಲಿ ಚಿತ್ರಗಳನ್ನು ರಚಿಸಲು ಮೊದಲ ಸಾಧನವೆಂದರೆ ಮಿಡ್ ಜರ್ನಿ, ಇಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಸ್ಟುಡಿಯೋ ಘಿಬ್ಲಿ-ಪ್ರೇರಿತ, ಹಯಾವೊ ಮಿಯಾಜಾಕ್ ಮತ್ತು ಇತರ ಕೀವರ್ಡ್‌ಗಳನ್ನು ಬಳಸಬಹುದು. ಇದರೊಂದಿಗೆ ನಿಮ್ಮ ಚಿತ್ರವು ಘಿಬ್ಲಿ ಶೈಲಿಯಾಗುತ್ತದೆ. ಇದಲ್ಲದೆ, Leonardo.ai ಘಿಬ್ಲಿ ಚಿತ್ರಗಳನ್ನು ರಚಿಸಲು ಉತ್ತಮ ಆಯ್ಕೆಯಾಗಿದೆ. ಇಲ್ಲಿ ನೀವು ಉಚಿತ ಕ್ರೆಡಿಟ್ಗಳನ್ನು ಪಡೆಯುತ್ತೀರಿ ಮತ್ತು ವಿವರವಾದ ಎಐ ಚಿತ್ರಗಳು ಮತ್ತು ವೀಡಿಯೊಗಳನ್ನು ರಚಿಸುವ ಅವಕಾಶವನ್ನು ಪಡೆಯುತ್ತೀರಿ. ವೆಬ್ ಅಪ್ಲಿಕೇಶನ್ ಬಳಸಿಕೊಂಡು ನೀವು ಕೆಲವು ಅದ್ಭುತವಾದಸ್ಟುಡಿಯೋ ಘಿಬ್ಲಿ-ಪ್ರೇರಿತ ಚಿತ್ರಗಳನ್ನು ರಚಿಸಬಹುದು. ನೀವು ನೀಡುವ ಪ್ರಾಂಪ್ಟ್‌ಗಳು ನಿಖರವಾಗಿ ವೆಯೆ ಎಂದು ಖಚಿತಪಡಿಸಿಕೊಳ್ಳಬೇಕು ಮತ್ತು ಸರಿಯಾದ ಫಲಿತಾಂಶಗಳನ್ನು ಪಡೆಯುವವರೆಗೆ ಚಿತ್ರಗಳನ್ನು ರಚಿಸುವುದನ್ನು ಮುಂದುವರಿಸಬೇಕು. ನೀವು ಘಿಬ್ಲಿ ಶೈಲಿಯ ಚಿತ್ರಗಳನ್ನು ಉಚಿತವಾಗಿ ರಚಿಸಲು ಬಯಸಿದರೆ ಎಲಾನ್ ಮಸ್ಕ್ ಅವರ ಗ್ರೋಕ್ ಎಐ ಅನ್ನು ಕೂಡ ಬಳಸಬಹುದು. Grok AI ChatGPT ಯಷ್ಟು ನಿಖರವಾದ ಚಿತ್ರಗಳನ್ನು ರಚಿಸಲು ಸಾಧ್ಯವಾಗದಿದ್ದರೂ ನೀವು ಅದನ್ನು ಉಚಿತವಾಗಿ ಅನುಭವಿಸಬಹುದು. ಗೂಗಲ್ ಎಐ ಸ್ಟುಡಿಯೋದ ಇತ್ತೀಚಿನ ಜೆಮಿನಿಯಲ್ಲಿಯೂ ಘಿಬ್ಲಿ ಶೈಲಿಯ ಚಿತ್ರಗಳನ್ನು ರಚಿಸಬಹುದು

Tags:
error: Content is protected !!