Mysore
18
overcast clouds

Social Media

ಗುರುವಾರ, 01 ಜನವರಿ 2026
Light
Dark

ವಕ್ಫ್‌ ತಿದ್ದುಪಡಿ ಮಸೂದೆ: ಲೋಕಸಭೆಯಲ್ಲಿ ಬಿಲ್‌ ಮಂಡಿಸಿದ ಕೇಂದ್ರ ಸರ್ಕಾರ

ನವದೆಹಲಿ: ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರ ವಿರೋಧ ಪಕ್ಷಗಳ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಇಂದು ವಕ್ಫ್‌ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡನೆ ಮಾಡಿದೆ.

ಲೋಕಸಭೆಯಲ್ಲಿ ಇಂದು(ಏಪ್ರಿಲ್‌.2) ಕೇಂದ್ರ ಸಂಸದೀಯ ವ್ಯವಹಾ ಮತ್ತು ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ವಕ್ಫ್‌ ತಿದ್ದುಪಡಿ ಬಿಲ್‌ ಅನ್ನು ಮಂಡಿಸಿದ್ದಾರೆ.

ಕಿರಣ್‌ ರಿಜಿಜು ಬಿಲ್‌ ಮಂಡಿಸುವಾಗ ಹೇಳಿದ್ದೇನು?

ಲೋಕಸಭೆ ಮತ್ತು ರಾಜ್ಯಸಭೆಗಳ ಜಂಟಿ ಸಮಿತಿಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಬಗ್ಗೆ ನಡೆದ ಚರ್ಚೆಯನ್ನು ಈ ದೇಶದ ಸಂಸತ್ತಿನ ಇತಿಹಾಸದಲ್ಲಿ ಇಲ್ಲಿಯವರೆಗೆ ಮಾಡಲಾಗಿಲ್ಲ ಎಂದು ನಾನು ತಿಳಿಸಲು ಬಯಸುತ್ತೇನೆ. ಜಂಟಿ ಸಮಿತಿಯ ಎಲ್ಲ ಸದಸ್ಯರಿಗೆ ನಾನು ಧನ್ಯವಾದ ಮತ್ತು ಅಭಿನಂದಿಸುತ್ತೇನೆ. ಇಲ್ಲಿಯವರೆಗೆ, ವಿವಿಧ ಸಮುದಾಯಗಳ ರಾಜ್ಯ ಹೊಂದಿರುವ ಒಟ್ಟು 284 ನಿಯೋಗಗಳು ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಸಮಿತಿಯ ಮುಂದೆ ಮಂಡಿಸಿವೆ. 25 ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಪ್ರಾಂತ್ಯಗಳು ವಕ್ಫ್‌ ಮಂಡಳಿಗಳು ಕೂಡ ತಮ್ಮ ಸಲ್ಲಿಕೆಗಳನ್ನು ಪ್ರಸ್ತುತಪಡಿಸಿವೆ ಎಂದು ಹೇಳಿದರು.

ಈ ಮಸೂದೆಯ ಬಗ್ಗೆ ಭರವಸೆ ಮಾತ್ರವಲ್ಲ, ಇದನ್ನು ವಿರೋಧಿಸುತ್ತಿರುವವರು ಕೂಡ ತಮ್ಮ ಹೃದಯದಲ್ಲಿ ಬದಲಾವಣೆಯನ್ನು ಹೊಂದುತ್ತಾರೆ ಎಂಬ ಖಾತ್ರಿ ನನಗೆ ಇದೆ. ಅಲ್ಲದೇ ಪ್ರತಿಯೊಬ್ಬರೂ ಈ ಮಸೂದೆಯನ್ನು ಸಕರಾತ್ಮಕ ಮನೋಭಾವದಿಂದ ಬೆಂಬಲಿಸುತ್ತಾರೆ ಎಂಬ ಆಶಯವಿದೆ ಎಂದರು.

Tags:
error: Content is protected !!