Mysore
21
broken clouds

Social Media

ಗುರುವಾರ, 01 ಜನವರಿ 2026
Light
Dark

ಗುಂಡ್ಲುಪೇಟೆ: ವ್ಯಾಪಾರ ಕೇಂದ್ರವಾದ ಶಿಕ್ಷಕರ ಭವನ

ಮಹೇಂದ್ರ ಹಸಗೂಲಿ

ರಾಷ್ಟ್ರನಾಯಕರ ಭಾವಚಿತ್ರಗಳ ಕೆಳಗೆ ಚಪ್ಪಲಿಗಳ ರಾಶಿ; ಸಾರ್ವಜನಿಕರ ಆಕ್ರೋಶ 

ಗುಂಡ್ಲುಪೇಟೆ: ಪಟ್ಟಣದ ಗುರುಭವನವನ್ನು ಚಪ್ಪಲಿ ಮಾರಾಟ ಮಾಡಲು ಬಾಡಿಗೆಗೆ ನೀಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಶಿಕ್ಷಕರಿಗೆ ಸಂಬಂಧಿಸಿದ ಸಭೆ, ಸಮಾರಂಭ ನಡೆಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಾಜಿ ಸಚಿವ ದಿ.ಎಚ್.ಎಸ್. ಮಹದೇವಪ್ರಸಾದ್ ೫೦ ಲಕ್ಷ ರೂ. ವೆಚ್ಚದಲ್ಲಿ ಗುರುಭವನವನ್ನು ನಿರ್ಮಿಸಿದ್ದರು.

ಭವನದಲ್ಲಿ ಭುವನೇಶ್ವರಿ ತಾಯಿಯ ಪೂಜೆ ನಡೆದಿದೆ. ಸರ್ಕಾರಿ ಕಾರ್ಯಕ್ರಮಗಳು ಜರುಗಿವೆ. ಭವನದ ಗೋಡೆಗಳಲ್ಲಿ ರಾಷ್ಟ್ರೀಯ ನಾಯಕರಾದ ಗಾಂಧೀಜಿ, ಬಸವಣ್ಣ, ಅಂಬೇಡ್ಕರ್, ಸರ್ವಪಲ್ಲಿ ರಾಧಾಕೃಷ್ಣನ್, ಮಾಜಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್, ಸೇರಿದಂತೆ ಅನೇಕ ಗಣ್ಯರ ಭಾವಚಿತ್ರಗಳಿವೆ.

ಇಂತಹ ಗಣ್ಯರ ಭಾವಚಿತ್ರಗಳ ಕೆಳಗೆ ಚಪ್ಪಲಿಗಳ ರಾಶಿ ಹಾಕಿಕೊಂಡು ಮಾರಾಟ ಮಾಡಲು ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಸಂಘ ಗುರುಭವನವನ್ನು ಬಾಡಿಗೆ ನೀಡಿರುವುದು ಸರಿಯಲ್ಲ ಎಂದು ಶಿಕ್ಷಕರು, ಸಾರ್ವಜನಿಕರ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಶಿಕ್ಷಕರ ಭವನ ಮೊದಲು ಸ್ಪರ್ಧಾತ್ಮಕ ಕಾರ್ಯಾಗಾರ, ವಿದ್ಯಾರ್ಥಿಗಳಿಗೆ ತರಬೇತಿ, ಶಿಕ್ಷಕರ ಕಾರ್ಯಾಗಾರ, ನಿವೃತ್ತ ಸಂಘದವರ ಸಭೆಗೆ, ಪ್ರಗತಿಪರ ಕನ್ನಡ ಪರ ಹೋರಾಟಗಾರರ ಸಭೆ ಸಮಾರಂಭಗಳಿಗೆ ಅನುಕೂಲವಾಗುತ್ತಿತ್ತು. ಆದರೆ ಚಪ್ಪಲಿ ಮಾರಾಟಕ್ಕೆ ಬಾಡಿಗೆ ನೀಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಕೇಳಿಬಂದಿದೆ.

” ಶಿಕ್ಷಣ ಸಂಸ್ಥೆ, ಶಿಕ್ಷಕರು, ಸಾರ್ವಜನಿಕರ ಸಭೆ, ಸಮಾರಂಭಗಳಿಗೆ ಅನುಕೂಲವಾಗುವ ಭವನವನ್ನು ಚಪ್ಪಲಿ ಮಾರಾಟಕ್ಕೆಂದು ಬಾಡಿಗೆ ನೀಡಿರುವುದು ಬೇಸರದ ಸಂಗತಿ. ರಾಷ್ಟ್ರನಾಯಕರ ಭಾವಚಿತ್ರಗಳ ಕೆಳಗೆ ಚಪ್ಪಲಿ ಮಾರಾಟ ಮಾಡುವುದು ಸರಿಯಲ್ಲ”

 -ಅಬ್ದುಲ್ ಮಾಲೀಕ್, ಕರ್ನಾಟಕ ಕಾವಲುಪಡೆ ಅಧ್ಯಕ್ಷ 

” ಭವನದ ನಿರ್ವಹಣೆಗೆಂದು ಬಾಡಿಗೆಗೆ ನೀಡಲಾಗಿದೆ. ಕೆಲವು ದಿನಗಳಲ್ಲಿ ಬಾಡಿಗೆ ಕರಾರು ಮುಗಿಯಲಿದ್ದು ಕೂಡಲೇ ಅವರನ್ನು ಖಾಲಿ ಮಾಡಿಸಲಾಗುವುದು.”

 -ಟಿ.ಆರ್.ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ

Tags:
error: Content is protected !!