Mysore
23
overcast clouds

Social Media

ಗುರುವಾರ, 28 ಮೇ 2026
Light
Dark

ಸದನದಲ್ಲಿ ಹನಿಟ್ರ್ಯಾಪ್‌ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಯತ್ನಾಳ್‌ ಉಚ್ಛಾಟನೆ: ಶಾಸಕ ಕೆ.ಹರೀಶ್‌ ಗೌಡ

ಮೈಸೂರು: ಸದನದಲ್ಲಿ ಹನಿಟ್ರ್ಯಾಪ್‌ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಯತ್ನಾಳ್‌ರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಕಾಂಗ್ರೆಸ್‌ ಶಾಸಕ ಕೆ.ಹರೀಶ್‌ ಗೌಡ ಹೇಳಿದ್ದಾರೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ರನ್ನು ಆರು ವರ್ಷ ಪಕ್ಷದಿಂದ ಉಚ್ಛಾಟನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ಯತ್ನಾಳ್ ಪಕ್ಷದ ಶಿಸ್ತು ಪಾಲಿಸುತ್ತಿರಲಿಲ್ಲ. ಸದನದಲ್ಲೂ ಯಾರಿಗೂ ಗೌರವ ಕೊಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಸೂಕ್ತ ಕ್ರಮ‌ಕೈಗೊಂಡಿದೆ. ಇದು ಎಲ್ಲಾ ಪಕ್ಷದವರಿಗೂ ಪಾಠವಾಗಬೇಕು. ನಮ್ಮಂತಹ ಕಿರಿಯ ಶಾಸಕರಿಗೆ ಇದು ಎಚ್ಚರಿಕೆಯ ಘಂಟೆಯಾಗಿದೆ ಎಂದರು.

ಇನ್ನು ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ನನಗೂ ಅಚ್ಚರಿ ತಂದಿದೆ. ಯಾವ ಕಾರಣಕ್ಕೆ ಭೇಟಿ ಮಾಡಿದ್ದಾರೆ ಆ ಬಗ್ಗೆ ನನಗೆ ಗೊತ್ತಿಲ್ಲ. ಅವರೇ ಬೆಂಗಳೂರಿಗೆ ಬಂದ ಮೇಲೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ. ನಾಳೆ ಅವರು ಯಾವ ಕಾರಣಕ್ಕೆ ಎಚ್‌ಡಿಕೆಯನ್ನು ಭೇಟಿ ಮಾಡಿದ್ದರು ಎಂದು ತಿಳಿಯಲಿದೆ ಎಂದರು.

 

Tags:
error: Content is protected !!