Mysore
21
mist

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಕರ್ನಾಟಕ ಬಂದ್‌: ಬೆಳಿಗ್ಗೆಯೆ ಪ್ರಯಾಣಿಕರಿಂದ ತುಂಬಿದ್ದ ವಿಮಾನ ನಿಲ್ದಾಣ

ಬೆಂಗಳೂರು: ಕರ್ನಾಟಕ ಬಂದ್‌ ಹಿನ್ನಲೆಯಲ್ಲಿ ಬೆಳಿಗ್ಗೆ 11ರ ನಂತರ ಕ್ಯಾಬ್‌ ಸೇವೆ ಇಲ್ಲದಿದ್ದರಿಂದ ಮಧ್ಯಾಹ್ನದ ವಿಮಾನಗಳಿಗೆ ಬೆಳಿಗ್ಗೆಯೆ ಪ್ರಯಾಣಿಕರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿದ್ದ ದೃಶ್ಯ ಕಂಡುಬಂದಿತು.

ಓಲಾ, ಉಬರ್‌ ಟ್ಯಾಕ್ಸಿಗಳು ಬೆಳಿಗ್ಗೆ 8ರ ನಂತರ ಇರುವುದಿಲ್ಲ ಎಂದು ಜನರು ಬೆಳಿಗ್ಗೆಯೇ ಟ್ಯಾಕ್ಸಿ ಮಾಡಿಕೊಂಡು ವಿಮಾನಕ್ಕೆ ಬಂದಿದ್ದರು, ಇದರಿಂದ ವಿಮಾನ ನಿಲ್ದಾಣದ ಡ್ರಾಪ್‌ ಪಾಯಿಂಟ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.

ಎರಡು ಟರ್ಮಿನಲ್‌ ಮಳಿಗೆಗಳ ಮುಂದೆ ಲಗೇಜ್‌ ಸಮೇತ ಕುಳಿತ್ತಿದ್ದ ಜನರು ಸಮಯ ಕಳೆಯಲು ತುಂಬಾ ಪ್ರಯಾಸ ಪಡುತ್ತಿದ್ದರು. ಕೆಲವರು ಕುಳಿತಲ್ಲೇ ನಿದ್ರೆಗೆ ಜಾರಿದ್ದರು.

ಎಂದಿನಂತೆ ಬಿಎಂಟಿಸಿ ವಾಯುವಜ್ರ ಬಸ್‌ಗಳು ಕಾರ್ಯ ನಿರ್ವಹಿಸಿದವು. ಆದರೆ, ಪ್ರಯಾಣಿಕರಿಲ್ಲದೆ ಖಾಲಿ ಓಡಾಡಿದವು.

Tags:
error: Content is protected !!