Mysore
21
overcast clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಓದುಗರ ಪತ್ರ: ಬಸ್ ತಂಗುದಾಣ ನಿರ್ಮಿಸಿ

ನಂಜನಗೂಡು ಕೇಂದ್ರ ಬಸ್ ನಿಲ್ದಾಣ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಕಡೆಯಿಂದ ಮೈಸೂರಿಗೆ ಹೋಗುವಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಕೆಲ ಖಾಸಗಿ ಬಸ್‌ಗಳು ನಂಜನಗೂಡು ಕೈಗಾರಿಕಾ ಪ್ರದೇಶದ ಸಮೀಪ ನಿಲುಗಡೆ ನೀಡುತ್ತಿದ್ದು, ಈ ಭಾಗದಲ್ಲಿ ಬಸ್ ತಂಗುದಾಣವಿಲ್ಲದ ಪರಿಣಾಮ ಜನರು ಬಿಸಿಲು, ಮಳೆಯಲ್ಲಿಯೇ ನಿಂತು ಬಸ್‌ಗಾಗಿ ಕಾಯಬೇಕಾಗಿದೆ.

ಕನಕನಗರ, ಕತ್ವಾಡಿಪುರ ಸೇರಿದಂತೆ ಇಂಡಸ್ಟ್ರಿಯಲ್ ಏರಿಯಾ ಸುತ್ತಮುತ್ತಲ ಕೂಲಿ ಕಾರ್ಮಿಕರು, ನೌಕರರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಮೈಸೂರಿಗೆ ಹೋಗಿಬರಲು ಇಲ್ಲಿಯೇ ನಿಂತು ಬಸ್‌ಗಾಗಿ ಕಾಯುತ್ತಾರೆ. ಆದರೆ, ಇಲ್ಲಿ ಬಸ್ ತಂಗುದಾಣವಿಲ್ಲದ ಪರಿಣಾಮ ಅವರು, ಬಿಸಿಲು, ಮಳೆಯಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕ್ಷೇತ್ರದ ಶಾಸಕರು ಈ ಬಗ್ಗೆ ಗಮನಹರಿಸಿ ನಂಜನಗೂಡು ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಿಕೊಡಬೇಕಿದೆ.

-ಅನಿಲ್ ಕುಮಾರ್, ನಂಜನಗೂಡು.

Tags:
error: Content is protected !!