ಮಳವಳ್ಳಿ: ಇಲ್ಲಿನ ಗೋಕುಲ ವಿದ್ಯಾಸಂಸ್ಥೆಯಲ್ಲಿ ವಿಷಾಹಾರ ಸೇವಿಸಿ ಅಸ್ವಸ್ಥರಾಗಿರುವ ಮಕ್ಕಳನ್ನು ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದೆ.
ಗುರುವಾರ ಬೆಳಿಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ರಾಜ್ಯಾಧ್ಯಕ್ಷ ನಾಗಣ್ಣಗೌಡ ಹಾಗೂ ತಂಡ ಭೇಟಿ ನೀಡಿ ಎಲ್ಲಡೆ ಪರಿಶೀಲನೆ ನಡೆಸಿದರು. ಹೋಳಿ ಹಬ್ಬದ ಬಾತ್ ತಿಂದು ಇಬ್ಬರು ವಿದ್ಯಾರ್ಥಿ ಸಾವು ಹಾಗೂ 28 ಮಕ್ಕಳು ಅಸ್ಪಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ಆಯೋಗವು ಭೇಟಿ ನೀಡಿ, ಘಟನೆಯ ಬಗ್ಗೆ ಅಧಿಕಾರಿಗಳು ಹಾಗೂ ಸಂಸ್ಥೆಯಿಂದ ಮಾಹಿತಿ ಪಡೆದುಕೊಂಡರು.
ಈ ವೇಳೆ ಮೇಘಾಲಯ ಶಿಕ್ಷಣ ಇಲಾಖೆ ಅಧಿಕಾರಿ ಪೀಟರ್ ಸನ್, ಹಾಗೂ ಕರೆಸಿನ್ ಟುವೆ ಮಳವಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಇದ್ದರು.





