Mysore
28
overcast clouds

Social Media

ಗುರುವಾರ, 13 ಮಾರ್ಚ್ 2025
Light
Dark

ಮಂಡ್ಯ: ಮದ್ದೂರಿನಲ್ಲಿ ಆಟೋ- ಕಾರು ಡಿಕ್ಕಿ, ಆಟೋ ಸಂಪೂರ್ಣ ಜಖಂ

ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ಗುಡಿಗೆರೆ ಬಳಿಯ ಮಳವಳ್ಳಿ-ಮದ್ದೂರು ಹೆದ್ದಾರಿಯಲ್ಲಿ ಆಟೋ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಆಟೋ ಸಂಪೂರ್ಣ ಜಖಂ ಆಗಿದೆ.

ಈ ಅಪಘಾತ ಕೆ.ಎಂ.ದೊಡ್ಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆಟೋದ ಬ್ರೇಕ್‌ ವೈಫಲ್ಯದಿಂದ ಈ ದುರಂತ ಸಂಭವಿಸಿದೆ. ಇದೇ ವೇಳೆ ಆಟೋ ಸಂಪೂರ್ಣ ಜಖಂ ಗೊಂಡಿದೆ. ಅಲ್ಲದೇ ಘಟನೆಯಲ್ಲಿ ಆಟೋ ಚಾಲಕ ಹನೀಫ್ ಎಂಬಾತ ಆಟೋದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇನ್ನು ಈ ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕೆ.ಎಂ.ದೊಡ್ಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Tags: