Mysore
19
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಬಿಸಿಲಿನಿಂದ ತತ್ತರಿಸಿದ ಬೆಂಗಳೂರಿಗೆ ತಂಪೆರದ ಮಳೆರಾಯ

ಬೆಂಗಳೂರು: ಬೇಸಿಗೆಯ ಬಿಸಿಲಿನಿಂದ ತತ್ತರಿಸಿದ್ದ ಬೆಂಗಳೂರಿನ ಜನತೆಗೆ ಮಳೆರಾಯ ತಂಪೆರೆದಿದ್ದಾನೆ.

ಬೇಸಿಗೆ ಕಾಲದ ಆರಂಭದಲ್ಲೆ ತಾಪಮಾನ ಹೆಚ್ಚಳವಿದ್ದ ಕಾರಣ ಕೆಲವ ದಿನಗಳಲ್ಲಿ ಮಳೆ ಬರುವುದರ ಬಗ್ಗೆ ಹವಮಾನ ಇಲಾಖೆ ಮಾಹಿತಿ ನೀಡಿದ್ದರು.

ಈಗ ಬೆಂಗಳೂರಿನ ವಿವಿಧೆಡೆ ಗಾಳಿ, ಗುಡುಗು ಸಹಿತ ಜೋರು ಮಳೆಯಾಗುತ್ತಿದೆ ಎಂಬ ಮಾಹಿತಿ ದೊರಕಿದೆ. ನಗರದ ಶಾಂತಿನಗರ, ಕಾರ್ಪೊರೇಷನ್‌, ರಿಚ್ಮಂಡ್‌ ಸರ್ಕಲ್‌ ಸೇರಿದಂತೆ ವಿವಿಧೆಡೆ ಗುಡುಗು ಸಹಿತ ಜೋರು ಮಳೆಯಾಗುತ್ತಿದೆ.

ಕೆ ಆರ್‌ ಮಾರ್ಕೆಟ್‌, ಮೆಜೆಸ್ಟಿಕ್‌ ಸೇರಿದಂತೆ ಇತರೆಡೆ ಮಳೆಯಾಗುತ್ತಿದೆ. ದಿಡೀರ್‌ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ಪರದಾಟ ನಡೆಸುತ್ತಿದ್ದು, ಅಲ್ಲಲ್ಲಿ ಟ್ರಾಫಿಕ್‌ ಜಾಂ ಕೂಡ ಉಂಟಾಗಿದೆ ಎನ್ನಲಾಗಿದೆ.

 

Tags:
error: Content is protected !!