ಬೆಂಗಳೂರು: ನಟಿ ರನ್ಯಾ ರಾವ್ ಅವರ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಸಚಿವರ ಕೈವಾಡವಿದೆ ಎನ್ನುವುದು ಬಿಜೆಪಿಯವರ ಉಹಾಪೋಹ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ರನ್ಯಾರಾವ್ ಪ್ರಕರಣದಲ್ಲಿ ಬಿಜೆಪಿಯವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಈ ಕೇಸ್‌ನಲ್ಲಿ ಕಾಂಗ್ರೆಸ್ ಸಚಿವರ ಕೈವಾಡವಿದೆ ಎಂಬ ಬಿಜೆಪಿಯವರ ಆರೋಪ ಬರಿ ಸುಳ್ಳು. ಎಲ್ಲವೂ ತನಿಖೆಯಿಂದ ಹೊರಬರಬೇಕಿದೆ ಎಂದು ಹೇಳಿದರು
ಬಿಜೆಪಿಯ ನಾಯಕರು ಸುಮ್ಮನೇ ಆ ಸಚಿವರ ಕೈವಾಡವಿದೆ, ಈ ಸಚಿವರ ಕೈವಾಡವಿದೆ ಎಂದು ಆರೋಪಿಸುತ್ತಾರೆ. ಇದೆಲ್ಲಾ ಊಹಾಪೋಹ. ಸಂಪೂರ್ಣ ತನಿಖೆಯಿಂದ ಸತ್ಯ ಹೊರಬರುತ್ತದೆ, ನಂತರ ಯಾರ ಕೈವಾಡವಿದೆ ಎಂಬುದು ತಿಳಿಯುತ್ತದೆ ಎಂದು ತಿರುಗೇಟು ನೀಡಿದರು.





