Mysore
16
scattered clouds

Social Media

ಶುಕ್ರವಾರ, 09 ಜನವರಿ 2026
Light
Dark

ಓದುಗರ ಪತ್ರ: ಪ್ಲಾಸ್ಟಿಕ್‌ ಬಳಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು

ಓದುಗರ ಪತ್ರ

ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಆಹಾರ ಪದಾರ್ಥಗಳ ತಯಾರಿಕೆಯ ವೇಳೆ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಆದೇಶಿಸಿದ್ದರೂ ಕೆಲ ಹೋಟೆಲ್, ಬೇಕರಿ, ಫಾಸ್ಟ್‌ಫುಡ್ ಸೆಂಟರ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ.

ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿಸುವುದು ಮಾತ್ರವಲ್ಲದೆ ಪ್ಲಾಸ್ಟಿಕ್ ಲೋಟ, ತಟ್ಟೆಗಳ ಬಳಕೆ ಮಾಡುವುದೂ ಆರೋಗ್ಯಕ್ಕೆ ಹಾನಿಕರವಾಗಿದ್ದು, ಇದು ಕ್ಯಾನರ್‌ಗೆ ಕಾರಣವಾಗುತ್ತದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ.

ಇಷ್ಟಿದ್ದರೂ ಕೆಲ ಹೋಟೆಲ್, ಫಾಸ್ಟ್‌ಫುಡ್ ಸೆಂಟರ್ ಹಾಗೂ ಬೇಕರಿಗಳಲ್ಲಿ ಆಹಾರ ತಯಾರಿಕೆ ವೇಳೆಯಲ್ಲಿ ಮಾತ್ರವಲ್ಲದೆ ತಿಂಡಿ, ಊಟ ಬಡಿಸುವಾಗಲೂ ತಟ್ಟೆಯ ಮೇಲೆ ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದಾರೆ. ಚಹ ಅಂಗಡಿಗಳು ಹಾಗೂ ಜ್ಯೂಸ್ ಸೆಂಟರ್ ಗಳಲ್ಲಿಯೂ ಪ್ಲಾಸ್ಟಿಕ್ ಲೋಟಗಳು ಬಳಕೆಯಾಗುತ್ತಿವೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಿ ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

-ಪಿ.ಭಾಗ್ಯ, ಪತ್ರಿಕೋದ್ಯಮ ವಿಭಾಗ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು.

Tags:
error: Content is protected !!