ಚಾಂದಿನಿ ಸೋಸಲೆ
ಕೆಲವು ಸಮುದಾಯಗಳು ಸಮಾಜದ ಮುಖ್ಯವಾಹಿನಿಯಲ್ಲಿ ನೆಲೆ ಇಲ್ಲದೇ ಭಾವನೆಯ ಒಪ್ಪಿಗೆಯನ್ನು ಅಪ್ಪದೇ ಮನೆ ಬಿಟ್ಟು ತನ್ನ ಅಸ್ತಿತ್ವಕ್ಕಾಗಿ ಬದುಕುತ್ತಿರುವವರನ್ನು ಈ ದಿನ ನಾವು ನೆನೆಯಲೇಬೇಕು. ಕೆಲವರಿಗೆ ನಿತ್ಯ ಮುಜುಗರವನ್ನು ನೀಡುತ್ತಾ, ಕಣ್ಣಿಗೆ ತಂಪು ಮುದ ನೀಡುತ್ತಾ, ಜನರನ್ನು ತೃಪಿಪಡಿಸುತ್ತಾ, ಹರಸುತ್ತಾ, ಬೇಡುತ್ತಾ ನಿಮ್ಮೊಡನೆ ಕೆಲವೊಮ್ಮೆ ಬೆರೆಯುತ್ತಾ ಬದುಕು ಕಾಣುವ ಮಂಗಳಮುಖಿ, ಕೋತಿ, ಜೋಗಪ್ಪ, ಹೆಣ್ಣಾಗಿ ಹುಟ್ಟಿ ಗಂಡಾಗಿ ಬದುಕುವ, ಗಂಡಾಗಿ ಹುಟ್ಟಿ ಹೆಣ್ಣಾಗಿ ಬದುಕುವ, ಹಲವು ಗುರುತಿಸುವಿಕೆಯ ಕುರುಹುಗಳೊಂದಿಗೆ ಸಂವಿಧಾನದ ಚೌಕಟ್ಟಿನಲ್ಲಿ ಬದುಕುತ್ತಿದ್ದಾರೆ.
ಸಂವಿಧಾನದ ಆಶಯದಂತೆ ಮಾತನಾಡುವ, ಬದುಕುವ, ವಿದ್ಯಾಭ್ಯಾಸದ ಸಮಾನ ಹಕ್ಕುಗಳು ಎಲ್ಲರಂತೆ ಎಲ್ಲಾ ಸಾಮಾನ್ಯ ಜನರಿಗೆ ತಲುಪಬೇಕು ಎಂಬುದಾಗಿದೆ. ಆದರೆ ಮನೆಯಲ್ಲಿ ನಮ್ಮ ಭಾವನೆಯನ್ನು ವ್ಯಕ್ತಪಡಿಸುವ ಹಕ್ಕು ನಾನು ಗಂಡಿನಿಂದ ಹೆಣ್ಣಾಗಬೇಕು, ಹೆಣ್ಣಿನಿಂದ ಗಂಡಾಗಬೇಕು ಎಂಬ ಮೂಲಭೂತ ಭಾವನೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಕೂಡ ಇಲ್ಲ. ಎಲ್ಲವೂ ತಿರಸ್ಕಾರವೇ. ನಾನು ಹೆಣ್ಣಾಗಿ ಇನ್ನೊಂದು ಗಂಡಿನ ಜೊತೆ ಬಾಳ ಸಂಗಾತಿಯಾಗಿ ಬದುಕಬೇಕೆಂಬ ಸಹಜ ಆಸೆ. ವ್ಯತಿರಿಕ್ತವಾಗಿ, ‘ನೀನು ಹೆಣ್ಣಲ್ಲ, ಮಕ್ಕಳಾಗುವುದಿಲ್ಲ. ನಿನ್ನ ದೇಹ, ಧ್ವನಿ, ಹೆಣ್ಣೆಂಬ ಸ್ವಾಭಾವಿಕ ಕುರುಹುಗಳಿಲ್ಲ ನಿನಗೆ. ಒಬ್ಬ ಗೃಹಿಣಿಯಾಗಿ ಬದುಕಲಾಗುವುದಿಲ್ಲ, ನೀನೊಂದು ಕಲ್ಲು’ ಎಂಬ ಕುಹಕ ನುಡಿಗಳು ಬೇರೆ! ಚಿಕ್ಕ ವಯಸ್ಸಿನಲ್ಲಿಯೇ, ‘ನೀನು ಹೆಣ್ಣಿನ ರೀತಿ ನುಲಿಯುತ್ತಿಯಾ, ಸೊಂಟ ಬಳಕಿಸುತ್ತಿಯಾ’ ಎಂಬ ಮಾತುಗಳು ನಮ್ಮನ್ನು ಮಾನಸಿಕ ಖಿನ್ನತೆಯಿಂದ ಬಳಲುವಂತೆ ಮಾಡುತ್ತದೆ. ಎಲ್ಲಿಯ ಸಮಾನತೆ..?
ಸಮುದಾಯವನ್ನು ಸಮಾಜದಲ್ಲಿ ಒಪ್ಪಿಕೊಳ್ಳಲು ಅವಕಾಶ ಕಲ್ಪಿಸಬೇಕು ಹಾಗೆಯೇ ಹೆಚ್ಚಿನ ವೇದಿಕೆಯನ್ನು ನಿರ್ಮಿಸಬೇಕು ಎಂದು ಮಾತನಾಡುತ್ತಾರೆ. ಆದರೆ ಸಿಕ್ಕುವ ಅವಕಾಶಗಳು ಕೇವಲ ಆಲಿಸುವುದಕ್ಕೇ ಸೀಮಿತವಾಗಿವೆ. ಸಮುದಾಯದ ಸಂಸ್ಕ ತಿ, ಅಲ್ಲಿರುವ ವಿಷಯಗಳನ್ನು ಅರ್ಥಮಾಡಿಕೊಳ್ಳುವುದನ್ನು ಹೊರತುಪಡಿಸಿ ಅತೀ ಹೆಚ್ಚಿನ ಭಾಗವಹಿಸುವಿಕೆಯನ್ನು ನೀಡಬೇಕು.
ಹೆಚ್ಚಿನ ಮಾಹಿತಿಯನ್ನು ಮಕ್ಕಳು, ಅಧ್ಯಾಪಕರು, ನಾಟಕ, ಸಿನಿಮಾಗಳಲ್ಲಿ ಹಂಚಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕು. ಸಮುದಾಯದಲ್ಲಿರುವ ಪ್ರತಿಭೆಯನ್ನು ಗುರುತಿಸುವಂತಹ ಕೆಲಸಗಳಾಗಬೇಕು. ಲೈಂಗಿಕ ಅಲ್ಪಸಂಖ್ಯಾತ ಸಮುದಾಯವು ಈವರೆಗೂ ಹಿಂಸೆಯನ್ನು ಅನುಭವಿಸುತ್ತಾ ಬದುಕುತ್ತಿದೆ. ಇಂತಹ ಸಂದರ್ಭದಲ್ಲಿ ಸಮುದಾಯವನ್ನು ಸಾಮಾಜಿಕವಾಗಿ ಒಳಗೊಳ್ಳುವ ಕೆಲಸ ನಮ್ಮನಿಮ್ಮೆಲ್ಲರದ್ದೂ ಆಗಿದೆ. ಇಂತಹ ಸಂದರ್ಭದಲ್ಲಿಸಮುದಾಯದವರಿಗೆ ಹೆಚ್ಚಿನ ಒತ್ತು ನೀಡುತ್ತಾ, ಒಳಗೂಳ್ಳುವಿಕೆಗೆ ಆದ್ಯತೆ ನೀಡಿದರೆ ಸಂವಿಧಾನದ ಆಶಯದಂತೆ ಸಮಾನ ಅವಕಾಶ ಕಲ್ಪಿಸಿದಂತಾಗುತ್ತದೆ. ಇದೊಂದು ಒಳಗೊಳ್ಳುವಿಕೆಯ ಸಂದೇಶವನ್ನು ಸಾರುತ್ತದೆ.
(ಲೇಖಕಿ ಕವಯಿತ್ರಿ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರ ಹಕ್ಕುಗಳ ಕಾರ್ಯಕರ್ತೆ)
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ನಮ್ಮ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಕೆಲವಾದರೂ ಹಕ್ಕುಗಳು ಸಿಕ್ಕಿರುವ ಕಾರಣ ಭಾರತ ಗಣತಂತ್ರದ ಕುರಿತು ನಮಗೂ ಹೆಮ್ಮೆ





