Mysore
24
clear sky

Social Media

ಭಾನುವಾರ, 12 ಏಪ್ರಿಲ 2026
Light
Dark

ಮೈಸೂರು ಮೆಡಿಕಲ್‌ ಕಾಲೇಜು ಚರಾಸ್ತಿಗಳ ಜಪ್ತಿಗೆ ಕೋರ್ಟ್‌ ಆದೇಶ

ಮೈಸೂರು: ಮೈಸೂರಿನ 9ನೇ ಹೆಚ್ಚುವರಿ ನ್ಯಾಯಾಲಯವು ಮೈಸೂರು ಮೆಡಿಕಲ್‌ ಕಾಲೇಜು ಚರಾಸ್ತಿಗಳ ಜಪ್ತಿಗೆ ಆದೇಶ ಹೊರಡಿಸಿದೆ.

1989ರಿಂದ 2016ರವರೆಗೆ ಮೈಸೂರು ಮೆಡಿಕಲ್ ಪಿ.ಜಿ ಹಾಸ್ಟೆಲ್, ಹೋಲ್ಡ್ ಎಕ್ಸಿಬಿಷನ್ ಗ್ರೌಂಡ್ ಬಿಲ್ಡಿಂಗ್ ನಲ್ಲಿ ಅಡುಗೆ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದ ಹಲವಾರು ಕಾರ್ಮಿಕರನ್ನು ಡೀನ್‌ ಹಾಗೂ ವಾರ್ಡನ್‌ ಏಕಾಏಕಿ ಕೆಲಸದಿಂದ ತೆಗೆದುಹಾಕಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಮಿಕರು ಕಳೆದ 2016ರಲ್ಲಿಯೇ ನ್ಯಾಯಾಲಯಕ್ಕೆ ಅರ್ಜಿ ಹಾಕಿ ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ಲೇಬರ್ ಕೋರ್ಟ್‌ ಕಳೆದ 2019ರಲ್ಲಿ ಕಾರ್ಮಿಕರಿಗೆ ಕೆಲಸ ಕೊಡಬೇಕು ಮತ್ತು ಹಳೆಯ ವೇತನ ಬಾಕಿಯನ್ನೂ ಕೊಡಬೇಕು ಎಂದು ಆದೇಶ ಹೊರಡಿಸಿತ್ತು. ಇದೆಲ್ಲದರ ಮಧ್ಯೆ ಹೈಕೋರ್ಟ್‌ನಲ್ಲೂ ಸಹ ಆದೇಶ ಕೂಲಿ ಕಾರ್ಮಿಕರ ಪರವೇ ಬಂದಿತ್ತು.

ಕಾರ್ಮಿಕರ ಪರ ಕೋರ್ಟ್‌ ಆದೇಶ ಹೊರಡಿಸಿದ್ದರೂ, ಮೈಸೂರು ಮೆಡಿಕಲ್‌ ಸಂಸ್ಥೆ ಕಾರ್ಮಿಕರಿಗೆ ಸುಮಾರು 42 ಲಕ್ಷ ವೇತನ ಬಾಕಿ ಉಳಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ಮೆಡಿಕಲ್‌ ಕಾಲೇಜು ಚರಾಸ್ತಿಗಳ ಜಪ್ತಿಗೆ ಕೋರ್ಟ್ ಆದೇಶ ಹೊರಡಿಸಿದೆ.

Tags:
error: Content is protected !!