Mysore
18
overcast clouds

Social Media

ಮಂಗಳವಾರ, 13 ಜನವರಿ 2026
Light
Dark

ಮಂಡ್ಯ| ವಿಸಿ ನಾಲೆಗೆ ತಡೆಗೋಡೆ ನಿರ್ಮಾಣ: ವಾಹನ ಸವಾರರು ನಿರಾಳ

ಮಂಡ್ಯ: ವಿಸಿ ನಾಲೆಗೆ ಕಡೆಗೂ ತಡೆಗೋಡೆ ನಿರ್ಮಾಣ ಭಾಗ್ಯ ಒದಗಿಬಂದಿದ್ದು, ಈಗ ವಾಹನ ಸವಾರರು ನಿರಾಳರಾಗಿದ್ದಾರೆ.

ವಿಸಿ ನಾಲೆಯಲ್ಲಿ ಕಳೆದ ಆರು ವರ್ಷಗಳಿಂದ ನಡೆದ ಸಾಲು ಸಾಲು ದುರಂತಗಳಿಂದ ಜನರು ಈ ನಾಲೆಗೆ ಸಾವಿನ ನಾಲೆ ಎಂಬ ಪಟ್ಟ ಕಟ್ಟಿದ್ದರು.

ವಿಸಿ ನಾಲೆಯ ದಡದ ರಸ್ತೆ ಅತೀ ಕಿರಿದಾಗಿರುವುದರಿಂದ ಇಲ್ಲಿ ವಾಹನ ಸವಾರರು ಸ್ವಲ್ಪ ಯಾಮಾರಿದರೂ ವಾಹನ ಸಮೇತ ನಾಲೆಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದರು.

ನಾಲೆಗೆ ತಡೆಗೋಡೆ ಇಲ್ಲದಿರುವುದೇ ಈ ಅವಘಡಕ್ಕೆ ಪ್ರಮುಖ ಕಾರಣವಾಗಿತ್ತು. ಈ ಎಲ್ಲಾ ಅವಘಡಗಳು ಸಂಭವಿಸಿದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಹುಲಿಕೆರೆಯಿಂದ ಜೈಪುರದವರೆಗೆ ಎರಡೂವರೆ ಕಿ.ಮೀ ತಡೆಗೋಡೆ ನಿರ್ಮಾಣ ಮಾಡಿದೆ.

ಇದಲ್ಲದೇ ಡೇಂಜರ್‌ ಝೋನ್‌ಗಳಲ್ಲೂ ತಡೆಗೋಡೆ ಹಾಕಲು ಜಿಲ್ಲಾಡಳಿತ ಮುಂದಾಗಿದ್ದು, ಇನ್ನು ಮುಂದೆ ಯಾವುದೇ ಆತಂಕವಿಲ್ಲದೇ ವಾಹನ ಸವಾರರು ವಿಸಿ ನಾಲೆಯ ರಸ್ತೆಯಲ್ಲಿ ಸಂಚರಿಸಬಹುದಾಗಿದೆ.

 

Tags:
error: Content is protected !!