ಮಣಿಪುರ: ಮಣಿಪುರದಲ್ಲಿಂದು ಎರಡು ಬಾರಿ ತೀವ್ರತೆಯ ಭೂಕಂಪ ಸಂಭವಿಸಿದೆ.
ಮೊದಲ ಭೂಕಂಪ ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಪೂರ್ವ ಇಂಫಾಲ್‌ನ ಪೂರ್ವಕ್ಕೆ 44 ಕಿ.ಮೀ ದೂರದಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದೆ. ಎರಡು ಬಾರಿ ಭೂಮಿ ಕಂಪಿಸಿದೆ ಎಂದು ಶಿಲ್ಲಾಂಗ್‌ನ ಪ್ರಾದೇಶಿಕ ಭೂಕಂಪನ ವಿಜ್ಞಾನ ಕೇಂದ್ರ ಖಚಿತಪಡಿಸಿದೆ.
ಎರಡನೇ ಬಾರಿಗೆ ಮಧ್ಯಾಹ್ನ 12.20 ಗಂಟೆ ವೇಳೆಗೆ ಕಾಮ್ಜಾಂಗ್ ಜಿಲ್ಲೆಯಲ್ಲಿ 66 ಕಿ.ಮೀ ಆಳದಲ್ಲಿ 4.1ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎರಡು ಬಾರಿ ಭೂಮಿ ಕಂಪಿಸಿದ ಪರಿಣಾಮ ಹಲವಾರು ಕಟ್ಟಡಗಳು ಬಿರುಕುಬಿಟ್ಟಿದೆ. ಆದರೆ ಈವರೆಗೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.





