ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ವಿಚಾರವಾಗಿ ಸದನದಲ್ಲಿ ಸೃಷ್ಠಿಯಾದ ಕೋಲಾಹಲಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ತೆರೆ ಎಳೆದಿದ್ದಾರೆ.
ಶಾಸಕ ಮಹಾಂತೇಶ ಕೌಜಲಗಿ, ಗ್ರಾಮಗಳಲಿ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಕೇಳಿದ ಪ್ರಶ್ನೆಗೆ ವಿಪಕ್ಷ ಸದಸ್ಯರು ಅಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಟಾರ್ಗೆಟ್ ಫಿಕ್ಸ್ ಮಾಡಿರೋದೆ ಕಾರಣ ಎಂದು ಆಪಾದಿಸಿದರು.
ಅಕ್ರಮ ಮದ್ಯ ಮಾರಾಟದಿಂದ ಎಸ್‌ಸಿ/ಎಸ್‌ಟಿ ಕಾಲೋನಿಗಳಲ್ಲಿ ಕಡಿಮೆ ವಯಸ್ಸಿನ ಯುವಕರೇ ಸಾವಿಗೀಡಾಗುತ್ತಿದ್ದಾರೆ ಎಂದು ಅರಗ ಜ್ಞಾನೆಂದ್ರ ಹೇಳಿಕೆ ನೀಡಿದರು.
ಈ ಹೇಳಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ನಾರಾಯಣ ಸ್ವಾಮಿ, ಯಾಕ್ರೀ ಅರಗ ಅವರೇ ಎಸ್‌ಸಿ/ಎಸ್‌ಟಿ ಜನ ಮಾತ್ರಾ ಮಧ್ಯ ಕುಡೀತಾರಾ? ನೀವು ಕುಡಿಯಲ್ವಾ? ಎಂದು ಗರಂ ಆದ್ರು.
ಈ ವೇಳೆ ಡಿಕೆಶಿ ಮಧ್ಯ ಪ್ರವೇಶಿಸಿ, ರಾಜ್ಯಾಪಾಲರ ಭಾಷಣ ಮೇಲೆ ಚರ್ಚೆ ಆಗಲಿ. ಆರಗ ಜ್ಞಾನೇಂದ್ರ ಅವರು ಗೃಹ ಸಚಿವರು ಆಗಿದ್ದವರು. ಅವರ ಕಾಲದಲ್ಲಿ ಎಷ್ಟು ಅಕ್ರಮ ಮದ್ಯ ಮಾರಾಟ ನಿಲ್ಲಿಸಿದ್ದಾರೆ? ಎಂದು ಚರ್ಚೆ ಆಗಲಿ ಎಂದು ಕೋಲಾಹಲಕ್ಕೆ ತೆರೆ ಎಳೆದರು.





