Mysore
19
scattered clouds

Social Media

ಭಾನುವಾರ, 11 ಜನವರಿ 2026
Light
Dark

ಪ್ರಾಣಿಗಳ ದಾಹ ನೀಗಿಸಲು ಮುಂದಾದ ಅರಣ್ಯ ಇಲಾಖೆ

ಕೆರೆ-ಕಟ್ಟೆಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು; ಪ್ರಾಣಿಗಳು ನಾಡಿಗೆ ಬಾರದಂತೆ ತಡೆಯುವ ಯತ್ನ 

ಅನಿಲ್ ಅಂತರಸಂತೆ

ಅಂತರಸಂತೆ: ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ಪ್ರಾಣಿ- ಪಕ್ಷಿಗಳು, ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗುತ್ತಿದ್ದು, ಈ ಸಂದರ್ಭದಲ್ಲಿ ಕಾಡಿನ ಪ್ರಾಣಿಗಳ ಸಂಕಷ್ಟ ಹೇಳತೀರದು. ಕಾಡು ಪ್ರಾಣಿಗಳು ನೀರಿಗಾಗಿ ಕಾಡಿನಿಂದ ಹೊರಬರುವ ಸಂಭವವಿರುತ್ತದೆ. ಈ ವೇಳೆ ಪ್ರಾಣಿ-ಮಾನವ ಸಂಘರ್ಷ ಉಂಟಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಯೇ ಕಾಡು ಪ್ರಾಣಿಗಳ ನೀರಿನ ದಾಹವನ್ನು ತಣಿಸಲು ಅರಣ್ಯ ಇಲಾಖೆ ಕಾಡಿನ ಕೆರೆ-ಕಟ್ಟೆಗಳಿಗೆ ಟ್ಯಾಂಕರ್‌ಗಳ ಮೂಲಕ ನೀರನ್ನು ತುಂಬಿಸುವ ಕೆಲಸ ಮಾಡತ್ತಿದೆ.

ಬೇಸಿಗೆ ಸಂದರ್ಭದಲ್ಲಿ ಕಾಡಿ ನಲ್ಲಿರುವ ಕೆರೆ-ಕಟ್ಟೆಗಳೆಲ್ಲ ಬತ್ತಿ ಹೋಗುತ್ತಿದ್ದಂತೆ ಪ್ರಾಣಿ ಗಳು ನೀರಿಗಾಗಿ ಅಲೆದಾಡು ತ್ತಿರುತ್ತವೆ. ನೂರಾರು ಕಿ. ಮೀ. ಪ್ರಯಾಣಿಸುತ್ತಾ ಕಾಡಿ ನಿಂದ ಹೊರಬರುವ ಸಾಧ್ಯ ತೆಯೂ ಇರುತ್ತದೆ. ಸಣ್ಣಪುಟ್ಟ ಪ್ರಾಣಿ ಪಕ್ಷಿಗಳಿಗೇನೋ ಅಲ್ಪ ಸ್ವಲ್ಪ ನೀರಿದ್ದರೂ ಸಾಕು. ಆದರೆ ಆನೆ, ಹುಲಿ, ಕಾಡು ಕೋಣ ಮುಂತಾದ ಪ್ರಾಣಿಗಳಿಗಂತೂ ಬೇಸಿಗೆ ಕಾಡಲಿದೆ.

ಹೀಗೆ ಬತ್ತಿಹೋದ ಕಾಡಿನ ಕೆರೆ-ಕಟ್ಟೆಗಳಿಗೆ ಅರಣ್ಯ ಇಲಾಖೆ ನೀರು ತುಂಬಿಸುವ ಪ್ರಯತ್ನ ಮಾಡುತ್ತಿದೆ. ಟ್ಯಾಂಕರ್‌ಗಳ ಸಹಾಯದಿಂದ ನೀರು ತುಂಬಿಸಿ ಕಾಡು ಪ್ರಾಣಿಗಳ ದಾಹವನ್ನು ತಣಿಸುವ ಪ್ರಯತ್ನವನ್ನು ನಾಗರ ಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿ ಮಾಡುತ್ತಿದ್ದಾರೆ.

ಕಾಡಿನ ಪ್ರಾಣಿ-ಪಕ್ಷಿಗಳಿಗೆ ಕೆರೆ-ಕಟ್ಟೆಗಳೇ ನೀರಿನ ಮೂಲಗಳಾಗಿದ್ದು, ನಾಗರಹೊಳೆ ಮಧ್ಯಭಾಗದಿಂದ ಕೆಲವು ನದಿಗಳು ಹಾದುಹೋಗಿದ್ದು, ಅದರಲ್ಲಿಯೂ ಕಪಿಲಾ ನದಿಯು ನಾಗರಹೊಳೆ ಮತ್ತು ಬಂಡೀಪುರ ಅರಣ್ಯ ಪ್ರದೇಶಗಳಲ್ಲಿರುವ ಜೀವಿಗಳಿಗೆ ಪ್ರಮುಖ ನೀರಿನ ಆಕರವಾಗಿದೆ. ಅವುಗಳ ಆವಾಸಸ್ಥಾನಗಳಲ್ಲಿ ರುವ ಕೆರೆ-ಕಟ್ಟೆಗಳನ್ನು ತುಂಬಿಸುವ ನಿಟ್ಟಿನಲ್ಲಿ ನಾಗರ ಹೊಳೆ ಹುಲಿ ಸಂರಕ್ಷಿತ ಪ್ರದೇಶದ ಎಲ್ಲಾ ಕೆರೆಗಳಿಗೆ ಈ ವರ್ಷವೂ ಟ್ಯಾಂಕರ್‌ಗಳ ಮೂಲಕ ನೀರನ್ನು ತುಂಬಿಸ ಲಾಗುತ್ತಿದೆ. ಕಾಡಿನ ಕೆಲ ಕೆರೆಗಳ ಸಮೀಪ ಈ ಹಿಂದೆಯೇ ಕೊಳವೆ ಬಾವಿಗಳನ್ನು ತೆಗೆಯಲಾಗಿದ್ದು, ಅವುಗಳ ಮೂಲ ಕವೂ ಸ್ಥಳೀಯ ಕೆರೆಗಳಿಗೆ ನೀರನ್ನು ಪೂರೈಕೆ ಮಾಡಲಾ ಗುತ್ತಿದೆ. ಅಲ್ಲದೆ ಕಾಡಂಚಿನಲ್ಲಿರುವ ಕೆರೆಗಳಿಗೆ ಸ್ಥಳೀಯ ರಿಗೆ ಸೇರಿದ ಜಮೀನುಗಳಲ್ಲಿನ ಕೊಳವೆ ಬಾವಿ ಗಳಿಂದಲೂ ನೀರನ್ನು ತುಂಬಿಸಲಾಗುತ್ತಿದೆ. ಬೇಸಿಗೆಯಲ್ಲಿ ಕಾಡನ್ನು ಕಾಡ್ಗಿಚ್ಚಿನಿಂದ ರಕ್ಷಿಸಿಕೊಳ್ಳುವುದರ ಜತೆಗೆ ಪ್ರಾಣಿಗಳ ನೀರಿನ ಮೂಲವನ್ನು ನಿರ್ವಹಣೆ ಮಾಡುವ ಜವಾಬ್ದಾರಿಯೂ ಅರಣ್ಯ ಇಲಾಖೆ ಮೇಲಿದೆ.

ನಾಗರ ಹೊಳೆಗೆ ತಾರಕ, ಕಬಿನಿ ಆಸರೆ: ತಾರಕ ಮತ್ತು ಕಬಿನಿ ಜಲಾಶಯಗಳು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇ ಶದ ಪ್ರಮುಖ ನೀರಿನ ಮೂಲಗಳಾಗಿವೆ. ನಾಗರ ಹೊಳೆಯ ಶೇ. ೬೦ರಷ್ಟು ಜೀವಿಗಳು ಕಬಿನಿ ಮತ್ತು ತಾರಕ ಜಲಾಶಯಗಳ ನೀರನ್ನೇ ಅವಲಂಬಿಸಿವೆ. ಬಿಸಿಲಿನ ತಾಪ ಏರಿಕೆಯಾಗುತ್ತಿದ್ದಂತೆ ಕಬಿನಿ ಹಿನ್ನೀರಿನಲ್ಲಿ ಆನೆಗಳ ಹಿಂಡು ಬೀಡುಬಿಡುತ್ತವೆ. ಸಮೃದ್ಧವಾದ ಹಿನ್ನೀರಿನಲ್ಲಿ ವಿಶ್ರಾಂತಿ ಪಡೆಯುತ್ತಾ ಬೇಸಿಗೆ ಬಿಸಿಲಿನಿಂದ ತಮ್ಮನ್ನು ರಕ್ಷಿಸಿ ಕೊಳ್ಳುತ್ತವೆ.

ಬೇಸಿಗೆ ಸಂದರ್ಭದಲ್ಲಿ ಕಾಡಿನ ಕೆರೆಗಳು ಬತ್ತಿ ಹೋಗುತ್ತವೆ. ಆದ್ದರಿಂದ ಕೆರೆಗಳಿಗೆ ನೀರು ತುಂಬಿಸಬೇಕು. ಇಲ್ಲದಿದ್ದರೆ ಕಾಡುಪ್ರಾಣಿಗಳು ನೀರಿಗಾಗಿ ಅಲೆದಾಡುತ್ತಾ ಕಾಡಿನಿಂದ ಹೊರಬರುವ ಸಾಧ್ಯತೆ ಇರುತ್ತದೆ. ಕೆಲ ಕೆರೆಗಳಿಗೆ ಟ್ಯಾಂಕರ್‌ಗಳ ಮೂಲಕ ನೀರನ್ನು ಪೂರೈಸ ಲಾಗುತ್ತಿದೆ. ಇನ್ನು ಕೆಲ ಕೆರೆಗಳಿಗೆ ಸ್ಥಳೀಯರ ಸಹಕಾರ ಪಡೆದು, ಅವರ ಜಮೀನುಗಳ ಕೊಳವೆಬಾವಿಗಳಿಂದ ನೀರನ್ನು ಪೂರೈಸಲಾಗುತ್ತಿದೆ. -ಎಸ್. ಎಸ್. ಸಿದ್ದರಾಜು, ವಲಯ ಅರಣ್ಯಾಧಿಕಾರಿ, ಅಂತರಸಂತೆ ವಲಯ.

ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರಿನ ಅಭಾವ ಉಂಟಾಗುವುದರಿಂದ ಅವಶ್ಯವಿರುವ ಕಾಡಿನ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ನಾಗರಹೊಳೆ ವ್ಯಾಪ್ತಿಯ ೨೭ ಕೆರೆಗಳಲ್ಲಿ ಸೋಲಾರ್ ಪಂಪ್ ಅಳವಡಿಸಲಾಗಿದ್ದು, ಅವುಗಳ ಸಹಾಯ ದಿಂದಲೂ ಕೆಲವು ಕೆರೆಗಳಿಗೆ ನೀರು ತುಂಬಿಸ ಲಾಗುತ್ತದೆ. ಉಳಿದ ಕೆಲ ಕೆರೆಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತದೆ. -ಪಿ. ಎ. ಸೀಮಾ, ಡಿಸಿಎಫ್, ನಾಗರಹೊಳೆ.

ಒಟ್ಟು ೨೫೬ ಕೆರೆಗಳು. . . ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಟ್ಟು ೨೫೬ ಕೆರೆಗಳಿದ್ದು, ಇವುಗಳ ಪೈಕಿ ೨೭ ಕೆರೆಗಳಿಗೆ ಸೋಲಾರ್ ಪಂಪ್ ಅಳವಡಿಸಲಾಗಿದೆ. ಇವುಗಳಿಗೆ ಸೋಲಾರ್ ಮೂಲಕವೇ ಅಲ್ಲಿನ ಕೊಳವೆಬಾವಿಗಳ ಮೂಲಕ ನೀರು ತುಂಬಿಸಲಾಗುತ್ತದೆ. ಉಳಿದ ಕೆರೆಗಳ ಪೈಕಿ ಅವಶ್ಯವಿರುವ ಕೆರೆಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ.

ಕಾಡಿನಲ್ಲಿ ನೀರಿನ ಸಮಸ್ಯೆ ಎದುರಾದಾಗ ಕಾಡಿನ ಪ್ರಾಣಿಗಳು ನೀರನ್ನು ಅರಸಿ ಕಾಡಂಚಿನ ಗ್ರಾಮಗಳತ್ತ ನುಗ್ಗುತ್ತವೆ. ಇದರಿಂದ ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತದೆ. ಕಾಡಿನ ಕೆರೆಗಳಿಗೆ ನೀರು ತುಂಬಿಸಿದರೆ ಪ್ರಾಣಿಗಳು ಹೊರಬರುವುದು ತಪ್ಪುತ್ತದೆ. ಕೆಲ ಕಾಡಂಚಿನ ಕೆರೆಗಳಿಗೆ ಸ್ಥಳೀಯರ ಜಮೀನುಗಳಿಂದಲೂ ನೀರು ತುಂಬಿಸಲಾಗುತ್ತಿದೆ. ಇದರಿಂದ ಕಾಡು ಪ್ರಾಣಿಗಳು ಕಾಡಿನಿಂದ ಹೊರಬರುವುದು ತಪ್ಪುತ್ತದೆ. ಸಂಘರ್ಷವೂ ಕಡಿಮೆಯಾಗುತ್ತದೆ. –ಮಂಜು, ಕಾಡಂಚಿನ ರೈತರು

Tags:
error: Content is protected !!