ಮರೆಗುಳಿತನ ೬೦ ವರ್ಷ ಮೇಲ್ಪಟ್ಟವರಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ. ಜೀವನ ಶೈಲಿ ಮತ್ತು ಪರಿಸರ ತೊಂದರೆಗೆ ಕಾರಣವಾಗಬಹುದು ಎಂಬುದು ವೈದ್ಯರ ಅಭಿಪ್ರಾಯ. ತಜ್ಞರ ಪ್ರಕಾರ ಮೆದುಳಿಗೆ ಪುಷ್ಟಿ ನೀಡುವ ಆಹಾರಗಳ ಸೇವನೆ ಡಿಮೆನ್ಶಿಯಾ ಅಥವಾ ಮರೆಗುಳಿತನವನ್ನು ತಕ್ಕಮಟ್ಟಿಗಾದರೂ ಕಡಿಮೆ ಮಾಡಬಲ್ಲದು.
ಹಸಿರು ತರಕಾರಿಗಳ ಸೇವನೆಯಿಂದ ಸಾಕಷ್ಟು ಪೋಷಕಾಂಶಗಳು ಮೆದುಳುಸೇರಿದಂತೆ ದೇಹದ ವಿವಿಧ ಅಂಗಗಳ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇರಿಸಲು ಸಹಕಾರಿಯಾಗಿದೆ. ನಿಯಮಿತವಾಗಿ ಬಾದಾಮಿಯನ್ನು ತಿನ್ನುವುದು ಮೆದುಳಿಗೆ ಬಹಳ ಪ್ರಯೋಜಕಾರಿ ಎಂದು ಹೇಳಲಾಗುತ್ತದೆ. ಪ್ರೋಟೀನ್, ವಿಟಮಿನ್ ಬಿ೧೨, ವಿಟಮಿನ್ ಬಿ೬ ಹೇರಳವಾಗಿರುವ ಆಹಾರಗಳ ಸೇವನೆ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂಬುದು ವೈದ್ಯರ ಅಭಿಪ್ರಾಯ.
ಆಹಾರ ಸೇವನೆಯ ಜೊತೆಗೆ ನಿತ್ಯ ವ್ಯಾಯಾಮ ಮತ್ತು ಧನಾತ್ಮಕ ಯೋಚನೆಯೂ ಕೂಡ ಹಿರಿಯರಿಗೆ ಅಗತ್ಯವಾಗಿದೆ.





