Mysore
29
clear sky

Social Media

ಗುರುವಾರ, 12 ಫೆಬ್ರವರಿ 2026
Light
Dark

ಉದಯಗಿರಿ ಗಲಾಟೆ ಪ್ರಕರಣ: ಮೈಸೂರು ಚಲೋಗೆ ಅನುಮತಿ ನಿರಾಕರಣೆ

ಮೈಸೂರು: ವಿವಾದಿತ ಪೋಸ್ಟ್‌ಗೆ ಸಂಬಂದಿಸಿದಂತೆ ಉದಯಗಿರಿ ಪೊಲೀಸ್‌ ಠಾಣೆ ಹತ್ತಿರ ನಡೆದಿದ್ದ ಗಲಾಟೆ ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಮೈಸೂರು ಚಲೋ ಜನಜಾಗೃತಿ ಸಭೆಗೆ ಅನುಮತಿ ನಿರಾಕರಿಸಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ನಿಷೇಧಾಜ್ಞೆ ಜಾರಿ ವಿರೋಧಿಸಿ ಬಿಜೆಪಿ ಪಕ್ಷ ಹೈಕೋರ್ಟ್‌ ಮೊರೆ ಹೋಗಿದ್ದು, ಒಂದು ವೇಳೆ ಅನುಮತಿ ಸಿಕ್ಕರೆ ಬಿಜೆಪಿ ಮತ್ತೊಮ್ಮೆ ಮೈಸೂರು ಚಲೋ ನಡೆಸಲಿದೆ.

ಈ ಕುರಿತು ಸಮಿತಿಯ ಸಂಚಾಲಕ ಮಹೇಶ್‌ ಕಡಗದಾಳು ಮಾತನಾಡಿ. ಬಂಧಿತ ಆರೋಪಿಗಳ ಮೇಲೆ ಯುಎಪಿಎ (UAPA) ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಈ ಹಿನ್ನಲೆ ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿಯಿಂದ ಜನಜಾಗೃತಿ ಸಭೆ ಮಾಡಲಾಗುತ್ತಿತ್ತು. ಆದರೆ, ಸಭೆಗೆ ಅನುಮತಿ ನಿರಾಕರಿಸಿರುವುದರಿಂದ ನಿಶ್ಚಿತ ಸ್ಥಳದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಇನ್ನು ನಾಳೆಯ ಜನಾಂದೋಲನ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಾಕ್ಷ ಬಿವೈ ವಿಜಯೇಂದ್ರ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಗಲಾಟೆಗೆ ಬಿಜೆಪಿ, ಆರ್‌ಎಸ್‌ಎಸ್‌ ಕಾರಣವೆಂದು ಕೆಲ ಸಂಘಟನೆಗಳು ಜನಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದರು. ಜೊತೆಗೆ ಈ ಕಾರ್ಯಕ್ರಮಗಳ ಆಯೋಜನೆಯು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತವೆ ಎಂದು ಪೊಲೀಸರು ಅನುಮತಿಗೆ ನಿರಾಕರಿಸಿದ್ದಾರೆ.

 

 

Tags:
error: Content is protected !!