ರವೀಂದ್ರ ರೇಷ್ಮೆ, ಹಿರಿಯ ಪತ್ರಕರ್ತ
ರಾಜ್ಯ ಸರ್ಕಾರವು ೯ ವಿಶ್ವವಿದ್ಯಾಲಯಗಳನ್ನು ಮುಚ ಲು ಮುಂದಾಗಿರುವುದೇ ಒಂದು ಸೋಜಿಗ. ಈವಿವಿಗಳ ಪೈಕಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯ ಹಾಗೂ‘ಮಂಡ್ಯ ಯೂನಿಟ್ ವಿಶ್ವ ವಿದ್ಯಾಲಯ’ಗಳನ್ನು ಇದೇ ಸರ್ಕಾರ ಆರಂಭಿಸಿದೆ.
೨೦೧೬ರ ಡಿಸೆಂಬರ್ ತಿಂಗಳಲ್ಲಿ ಅಂದು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದ ಸರ್ಕಾರವು ಈ ಎರಡು ವಿವಿಗಳನ್ನು ಸ್ಥಾಪಿಸಿದ್ದು, ನನ್ನನ್ನು ವಿಶೇಷ ಅಧಿಕಾರಿಯಾಗಿ ನೇಮಕ ಮಾಡಿ, ಇಲ್ಲಿನ ಕಾಲೇಜುಗಳನ್ನು ಉನ ತೀಕರಣ ಮಾಡುವ ಜವಾಬ್ದಾ ರಿಯನ್ನು ನೀಡಿತ್ತು. ಈ ಎರಡು ವಿವಿಗಳಿಗೂ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯಿಂದರಾಷ್ಟ್ರೀಯ ಉತ ರ್ಷ್ ಶಿಕ ಣ ಅಭಿಯಾನ್ (ರೂಸಾ) ಅಡಿಯಲ್ಲಿ ತಲಾ ೫೫ ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಲಾಗಿತ್ತು. ಇದೊಂದು ಹೊಸ ಪ್ರಯೋಗವಾಗಿತ್ತು.
ಸಾಕಷ್ಟು ಸುಸ್ಥಿರವಾದ ಸೌಕರ್ಯಗಳು, ಬೋಧನೆ, ಸಂಶೋಧನೆ ಹಾಗೂ ಉತ ಮ -ಲಿತಾಂಶ ಇರುವ ಕಾಲೇಜುಗಳನ್ನು ಉನ ತೀಕರಿಸಿ ವಿಶ್ವವಿದ್ಯಾಲಯ ಮಟ್ಟಕ್ಕೆ ತರುವುದು ಈ ಅಭಿಯಾನದ ಉದ್ದೇಶವಾಗಿತ್ತು.ಈ ಯೋಜನೆಯನ್ನು ಆಗ ರಾಷ್ಟ್ರೀಯ eನ ಆಯೋಗದ ಅಧ್ಯಕ್ಷರಾಗಿದ್ದ ಸ್ಯಾಮ್ ಪಿಟ್ರೋಡ ಶಿ-ರಸ್ಸು ಮಾಡಿದ್ದರು. ೨೦೧೨ರಲ್ಲಿ ಅವರು ನೀಡಿದ ವರದಿಯಲ್ಲಿ ಸಾಂಪ್ರದಾಯಿಕ ವಿಶ ವಿದ್ಯಾಲಯದ ಜೊತೆಗೆ ಹೊಸ ಪ್ರಯೋಗ ಮಾಡಬೇಕು. ಅದಕ್ಕಾಗಿ ಸ್ನಾತಕೋತ ರ ಬೋಧನೆ, ಸಂಶೋಧನೆ ಗಳು ನಡೆಯುತ್ತಿರುವ ಹಾಗೂ ನ್ಯಾಕ್‌ನಲ್ಲಿ ಎ+ ಅರ್ಹತೆ ಪಡೆದಿರುವ ಕಾಲೇಜುಗಳನ್ನು ಆಯ್ಕೆ ಮಾಡಬೇಕು ಎಂದಿತ್ತು.
ಆಗ ಮೈಸೂರಿನ ಮಹಾರಾಣಿ ಮತ್ತು ಮಂಡ್ಯದ ಸರ್ಕಾರಿ ಮಹಾ ವಿದ್ಯಾಲಯವನ್ನು ಆಯ್ಕೆ ಮಾಡಲಾಯಿತು. ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದಲ್ಲಿ ೧) ಎರಡು ಮೂರು ಕಾಲೇಜು ಸೇರಿಸಿಮಹಾರಾಣಿ ಸಮುಚ ಯ ೨) ಏಕಾತ ಕ ವಿಶ ವಿದ್ಯಾಲಯ (ಒಂದೇ ಕಾಲೇಜಿನ ವಿವಿ) ಆಗ ಮಹಾರಾಣಿ ಹೋಂ ಸೈನ್ಸ್ ಕಾಲೇಜಿನಲ್ಲಿ ಒಟ್ಟು ೯ ಸಾವಿರ ವಿದ್ಯಾರ್ಥಿಗಳು ಇದ್ದರು. ಈಗ ೩,೫೦೦ ಮಾತ್ರ ಇದ್ದಾರೆ.
ಈ ಕಾಲೇಜುಗಳ ಅಭಿವೃದ್ಧಿಗೆ ಹೆಚ್ಚುವರಿ ನಿವ್ವಳ ಬಂಡವಾಳ ಬೇಕಿರಲಿಲ್ಲ. ಮಹಾರಾಣಿ ಕಾಲೇಜಿನಲ್ಲಿ ದೊಡ ದೊಡ ಕಟ್ಟಡಗಳಿವೆ. ಮಂಡ್ಯದಲ್ಲೂ ವಿಶಾಲವಾದ ಮೈದಾನ, ಕಟ್ಟಡ ಹಾಗೂ ಮೂಲ ಸೌಕರ್ಯಗಳಿವೆ. ಹೆಚ್ಚುವರಿ ಸವಲತ್ತುಗಳು ಬೇಕಾಗಬಹುದು ಎಂದು ಈ ೫೫ ಕೋಟಿ ರೂ. ಇಡಲಾಗಿತ್ತು.
ಮಹಾರಾಣಿ ಕಾಲೇಜಿಗೆ ಗ್ರಾಮೀಣ ಭಾಗದಿಂದ ಹೆಚ್ಚು ವಿದ್ಯಾರ್ಥಿಗಳು ಬರುತ್ತಿದ್ದರಿಂದ ಹಾಸ್ಟೆಲ್ ಅಗತ್ಯವಿತ್ತು. ಆ ಕಟ್ಟಡದ ನಿರ್ಮಾಣವೂ ಆಯಿತು. ಮಂಡ್ಯದಲ್ಲಿ ಆಡಳಿತ ಕಚೇರಿ, ಕುಲಪತಿಗಳ ಕಚೇರಿ ಹಾಗೂ ಗ್ರಂಥಾಲಯವನ್ನು ಸ್ಥಾಪಿಸಲಾಯಿತು.
ಬೆಂಗಳೂರು ವಿವಿ ಕುಲಪತಿಯೇ ಮಹಾರಾಣಿ ಕ್ಲಸ್ಟರ್ ವಿವಿಯ ಕುಲಪತಿ ಹಾಗೂ ಮೈಸೂರು ವಿವಿ ಕುಲಪತಿ ಅವರೇ ಮಂಡ್ಯ ವಿವಿಯ ಕುಲಪತಿಯಾಗಿ ಜವಾಬ್ದಾರಿ ನಿರ್ವಹಿಸಲು ಸೂಚಿಸಲಾಗಿತ್ತು. ಒಂದು ವಿವಿಗೆ ಮುಖ್ಯಸ್ಥರೇ ಇಲ್ಲದಿದ್ದರೆ ಹೇಗೆ?
ವಿಶ್ವವಿದ್ಯಾಲಯಗಳ ರೂಪುರೇಷೆ ಹೇಗಿರಬೇಕೆಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಸಮಿತಿ ಈ ಹಿಂದೆಯೇ ನಿರ್ಧರಿಸಿತ್ತು. ಇದರ ಅನ್ವಯ ವಿವಿಗಳಿಗೆ ಪ್ರತ್ಯೇಕವಾದ ಕುಲಪತಿಗಳಿರಬೇಕಿತ್ತು. ಆಗ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿತ್ತು. ನಾನು ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಅಲ್ಲಿಗೇ ಹೋದೆ. ಅನುಮೋದನೆ ಸಿಕ್ಕಿದ್ದ ಶಾಸನದ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಿಸಿದಾಗ, ಅದನ್ನು ತಿದ್ದುಪಡಿ ಮಾಡಿಸಿ ಪ್ರತ್ಯೇಕ ಕುಲಪತಿಗಳ ನೇಮಕ ಮಾಡಲಾಯಿತು.
೨೦೧೮ರಲ್ಲಿ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಸಮ್ಮಿಶ್ರ ಸರ್ಕಾರ, ಬೆಂಗಳೂರು ನೃಪತುಂಗ ರಸ್ತೆಯಲ್ಲಿದ್ದ ಸರ್ಕಾರಿ ವಿeನ ಕಾಲೇಜನ್ನು ನೃಪತುಂಗ ವಿಶ್ವವಿದ್ಯಾಲಯ ಎಂದು ಸ್ಥಾಪಿಸಿತು. ಇದಕ್ಕೂ ಯುಜಿಸಿಯಿಂದ ಅನುದಾನ ಬಂದಿತ್ತು. ಈ ಮೂರು ವಿವಿಗಳಿಗೂ ಇದೇ ಕಾಂಗ್ರೆಸ್ ಸರ್ಕಾರ ಮಂಜೂರಾತಿ ಪಡೆದುಕೊಂಡಿತ್ತು.
ವಿವಿಗಳಿಗೆ ಕುಲಪತಿಗಳನ್ನು ನೇಮಕ ಮಾಡುವ ಸಮಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ನಂತರ ಬಂದ ಬಸವರಾಜ ಬೊಮ್ಮಾಯಿ ಅವರು, ಚುನಾವಣೆ ಹತ್ತಿರವಾದ ಸಂದರ್ಭದಲ್ಲಿ ೬ ವಿಶ್ವವಿದ್ಯಾನಿಲಯಗಳಿಗೆ ಮಂಜೂರಾತಿ ನೀಡಿ, ಒಂದೇ ದಿನ ಎಲ್ಲವನ್ನೂ ಉದ್ಘಾಟಿಸಿದರು.
ವಿಶ್ವವಿದ್ಯಾನಿಲಯಗಳಿಗೆ ೨೦೦/ ೩೦೦ ಎಕರೆ ಜಗ ಬೇಕಿಲ್ಲ. -ನ್ಸ್ ದೇಶದ ೨೦೦ ವರ್ಷಗಳ ಇತಿಹಾಸ ಇರುವ ಪ್ಯಾರಿಸ್ ವಿಶ್ವವಿದ್ಯಾನಿಲಯ ಈಗಲೂ ಮಲ್ಟಿಸ್ಟೋರ್ ಕಟ್ಟಡದಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ಎಲ್ಲರೂ ಯೋಚಿಸಬೇಕು. ಒಟ್ಟಾರೆ ಕಾಂಗ್ರೆಸ್ ಸರ್ಕಾರ ತಾನೇ ಆರಂಭಿಸಿದ ವಿವಿಗಳನ್ನು ಮುಚ್ಚಿ ದಾಖಲೆ ನಿರ್ಮಿಸಲು ಹೊರಟಂತಿದೆ.
“ ೨೦೧೮ರಲ್ಲಿ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಸಮ್ಮಿಶ್ರ ಸರ್ಕಾರ, ಬೆಂಗಳೂರು ನೃಪತುಂಗ ರಸ್ತೆಯಲ್ಲಿದ್ದ ಸರ್ಕಾರಿ ವಿಜ್ಞಾನ ಕಾಲೇಜನ್ನು ನೃಪತುಂಗ ವಿಶ್ವವಿದ್ಯಾಲಯ ಎಂದು ಸ್ಥಾಪಿಸಿತು. ಇದಕ್ಕೂ ಯುಜಿಸಿಯಿಂದ ಅನುದಾನ ಬಂದಿತ್ತು. ಈ ಮೂರು ವಿವಿಗಳಿಗೂ ಇದೇ ಕಾಂಗ್ರೆಸ್ ಸರ್ಕಾರ ಮಂಜೂರಾತಿ ಪಡೆದುಕೊಂಡಿತ್ತು. ವಿವಿಗಳಿಗೆ ಕುಲಪತಿಗಳನ್ನು ನೇಮಕ ಮಾಡುವ ಸಮಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ನಂತರ ಬಂದ ಬಸವರಾಜ ಬೊಮ್ಮಾಯಿ ಅವರು, ಚುನಾವಣೆ ಹತ್ತಿರವಾದ ಸಂದರ್ಭದಲ್ಲಿ ೬ ವಿಶ್ವವಿದ್ಯಾನಿಲಯಗಳಿಗೆ ಮಂಜೂರಾತಿ ನೀಡಿ, ಒಂದೇ ದಿನ ಎಲ್ಲವನ್ನೂ ಉದ್ಘಾಟಿಸಿದರು”





