ಶ್ರೀರಂಗಪಟ್ಟಣ: ಪಟ್ಟಣ ಪುರಸಭಾ ವ್ಯಾಪ್ತಿಯ ವಾರ್ಡ್ ನಂಬರ್.1ರ ಬಡಾವಣೆಯಲ್ಲಿ ವಾಸವಾಗಿದ್ದ ವಯೋವೃದ್ಧೆಯೊಬ್ಬರ ಗುಡಿಸಲು ಮನೆಗೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣ ಮನೆ ಭಸ್ಮವಾಗಿದೆ.
ಸುಮಾರು 70 ವರ್ಷದ ವಯೋವೃದ್ದೆ ದೇವಮ್ಮ ಎಂಬುvವರು ಒಬ್ಬರೇ ವಾಸವಿದ್ದ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು, ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ.
ಅಕ್ಕ ಪಕ್ಕದ ಮನೆಯವರು ಉರಿಯುವ ಗುಡಿಸಲಿಗೆ ಬಿಂದಿಗೆ, ಬಕೇಟ್‌ನಲ್ಲಿ ನೀರು ತಂದು ಹಾಕಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಸದ್ಯ ಮನೆಯಿಂದ ಹೊರಗೆ ಬಂದಿದ್ದ ವೃದ್ಧೆ ದೇವಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪುರಸಭೆ ಹಾಗೂ ಸದಸ್ಯರು ಮನೆ ಕಳೆದುಕೊಂಡಿರುವ ವೃದ್ಧೆಗೆ ಪುನರ್ವಸತಿಗೆ ಸಹಾಯ ಮಾಡಬೇಕೆಂದು ಸ್ಥಳೀಯ ಮನವಿ ಮಾಡಿದ್ದಾರೆ.





